×
Ad

ವಿಶ್ವಾಸಮತ ಗೆದ್ದ ನೇಪಾಳ ಪ್ರಧಾನಿ

Update: 2024-03-13 22:09 IST

ಪುಷ್ಪಕಮಲ ದಹಾಲ್ | Photo: PTI

ಕಠ್ಮಂಡು: ನೇಪಾಳದ ಪ್ರಧಾನಿ ಪುಷ್ಪಕಮಲ ದಹಾಲ್ `ಪ್ರಚಂಡ' ಬುಧವಾರ ಸಂಸತ್‍ನಲ್ಲಿ ವಿಶ್ವಾಸಮತ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ (ಮಾವೋವಾದಿ) ಪಕ್ಷದ ಮುಖಂಡರಾಗಿರುವ ಪುಷ್ಪಕಮಲ ದಹಾಲ್ 275 ಸದಸ್ಯ ಬಲದ `ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್'ನಲ್ಲಿ 157 ಮತಗಳನ್ನು ಪಡೆಯುವುದರೊಂದಿಗೆ ವಿಶ್ವಾಸಮತ ಗೆದ್ದಿದ್ದಾರೆ. ನೇಪಾಳಿ ಕಾಂಗ್ರೆಸ್ ಪಕ್ಷದ ಜತೆಗಿನ ಮೈತ್ರಿಯನ್ನು ಕಡಿದುಕೊಂಡ ದಹಾಲ್ ಸಿಪಿಎನ್(ಯುಎಮ್-ಎಲ್) ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಹೊಸ ಸರಕಾರ ರಚಿಸಿದ್ದಾರೆ. 2002ರಲ್ಲಿ ಪ್ರಧಾನಿ ಪಟ್ಟಕ್ಕೇರಿದ ಬಳಿಕ ದಹಾಲ್ ಮೂರನೇ ಬಾರಿಗೆ ಸಂಸತ್‍ನಲ್ಲಿ ವಿಶ್ವಾಸ ಮತ ಕೋರಿದಂತಾಗಿದೆ. ನೇಪಾಳದ ಸಂವಿಧಾನದ ಪ್ರಕಾರ ಆಡಳಿತಾರೂಢ ಮೈತ್ರಿಕೂಟದಿಂದ ಮಿತ್ರಪಕ್ಷವೊಂದು ಬೆಂಬಲ ವಾಪಾಸು ಪಡೆದರೆ ಪ್ರಧಾನಿ ಸಂಸತ್‍ನಲ್ಲಿ ವಿಶ್ವಾಸಮತ ಸಾಬೀತು ಪಡಿಸಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News