ಅಮೆರಿಕದ ಸಮರನೌಕೆಗೆ ಫೆಲೆಸ್ತೀನಿಯನ್ ಪರ ಗುಂಪಿನ ತಡೆ
Update: 2023-11-05 00:01 IST
Screengrab from video
ವಾಷಿಂಗ್ಟನ್: ಗಾಝಾದಲ್ಲಿ ಇಸ್ರೇಲ್ ಸೇನೆ ನಡೆಸುತ್ತಿರುವ ದಾಳಿಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಫೆಲೆಸ್ತೀನಿಯನ್ ಪರ ಗುಂಪೊಂದು ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್ ಬಂದರಿಗೆ ನುಗ್ಗಿ, ಇಸ್ರೇಲ್ನತ್ತ ಹೊರಡಲು ಸಿದ್ಧವಾಗಿದ್ದ ಅಮೆರಿಕದ ಸಮರನೌಕೆಗೆ ತಡೆಯೊಡ್ಡಿದ ಘಟನೆ ಶುಕ್ರವಾರ ವರದಿಯಾಗಿದೆ.
ಬಂದರಿನಿಂದ ಹೊರಡಲು ಸಿದ್ಧವಾಗಿದ್ದ ‘ಕೇಪ್ ಓರ್ಲಾಂಡೊ’ ಸಮರನೌಕೆಯ ಮೇಲೆ ಹತ್ತಿದ ಮೂವರು ಪ್ರತಿಭಟನಾಕಾರರು ಬಂದರಿನಿಂದ ಹೊರಡದಂತೆ ತಡೆಯೊಡ್ಡಿ ಫೆಲೆಸ್ತೀನ್ ಬೆಂಬಲಿಸಿ ಘೋಷಣೆ ಕೂಗಿದರು. ಆಗ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಮರ ನೌಕೆಯ ಮೇಲೇರಿದ್ದ ಮೂವರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.