ಯುಎಇ ಅಧ್ಯಕ್ಷರನ್ನು ಭೇಟಿ ಮಾಡಿದ ಪುಟಿನ್
Update: 2023-12-06 22:40 IST
Photo: PTI
ಅಬುಧಾಬಿ: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬುಧವಾರ ಯುಎಇಗೆ ಆಗಮಿಸಿದ್ದಾರೆ ಎಂದು ಯುಎಇ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ವರದಿ ಮಾಡಿದೆ.
ಅಧ್ಯಕ್ಷರ ವಿಮಾನ ಅಬುಧಾಬಿಯಲ್ಲಿ ಲ್ಯಾಂಡ್ ಆಗಿದ್ದು ವಿಮಾನ ನಿಲ್ದಾಣದಲ್ಲಿ ಯುಎಇ ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ ಖಾಸರ್ ಅಲ್‍ವತನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುಎಇ ಅಧ್ಯಕ್ಷ ಶೇಖ್ ಮುಹಮ್ಮದ್ ಅವರು ಪುಟಿನ್‍ರನ್ನು ಹಾರ್ದಿಕವಾಗಿ ಸ್ವಾಗತಿಸಿದರು ಎಂದು ರಶ್ಯದ ಆರ್‍ಐಎ ನೊವೋಸ್ತಿ ಸುದ್ಧಿಸಂಸ್ಥೆ ವರದಿ ಮಾಡಿದೆ.