ಖತರ್, ಇರಾಕ್ ಬಳಿಕ ಸಿರಿಯಾದಲ್ಲಿನ ಅಮೆರಿಕ ನೆಲೆಯಲ್ಲಿ ಕಟ್ಟೆಚ್ಚರ!
Update: 2025-06-23 23:56 IST
PC | uncredited image
ಡಮಾಸ್ಕಸ್: ತನ್ನ ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದ್ದಕ್ಕೆ ಪ್ರತಿಕಾವಾಗಿ ಖತರ್ ಹಾಗೂ ಇರಾಕ್ ನಲ್ಲಿರುವ ಅಮೆರಿಕ ನೆಲೆಗಳ ಮೇಲೆ ಇರಾನ್ ದಾಳಿ ಮಾಡಿದ ಬಳಿಕ, ಸಿರಿಯಾದಲ್ಲಿನ ಅಮೆರಿಕ ನೆಲೆಗಳ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ ಎಂದು Aljazeera ವರದಿ ಮಾಡಿದೆ.
ಈಶಾನ್ಯ ಸಿರಿಯಾದಲ್ಲಿರುವ ಅಮೆರಿಕದ ಮುಖ್ಯ ನೆಲೆಯಲ್ಲಿ ಸಂಪೂರ್ಣವಾಗಿ ಕಟ್ಟೆಚ್ಚರ ವಹಿಸಲಾಗಿದ್ದು, ಇರಾನ್ ಅಥವಾ ಇರಾನ್ ಬೆಂಬಲಿತ ಗುಂಪುಗಳ ಸಂಭಾವ್ಯ ದಾಳಿಗಳನ್ನು ಎದುರಿಸಲು ಸಜ್ಜುಗೊಂಡಿದೆ ಎಂದು ಸಿರಿಯಾದ ಭದ್ರತಾ ಮೂಲವೊಂದು ತಿಳಿಸಿದೆ.
ಸಿರಿಯಾದಲ್ಲಿರುವ ಅಮೆರಿಕದ ನೆಲೆಯನ್ನು ಕಸ್ರಾಕ್ ಎಂದು ಕರೆಯಲಾಗುತ್ತದೆ. ಇದು ಈಶಾನ್ಯ ಹಸಕಾ ಪ್ರಾಂತ್ಯದಲ್ಲಿರುವ ಎರಡು ನೆಲೆಗಳಲ್ಲಿ ಒಂದಾಗಿದೆ. ಅಲ್ಲಿ ಅಮೆರಿಕ ಪಡೆಗಳು ನೆಲೆಗೊಂಡಿವೆ.