×
Ad

ಅತ್ಯಾಚಾರ ಪ್ರಕರಣ | ಗರ್ಭಪಾತಕ್ಕೆ ಯುಎಇ ಅನುಮತಿ

Update: 2024-06-21 22:41 IST

ಸಾಂದರ್ಭಿಕ ಚಿತ್ರ

ಅಬುಧಾಬಿ : ಅತ್ಯಾಚಾರ ಮತ್ತು ರಕ್ತಸಂಬಂಧಿಗಳ ನಡುವಿನ ದೈಹಿಕ ಸಂಬಂಧದ ಪ್ರಕರಣಗಳಲ್ಲಿ ಗರ್ಭಪಾತಕ್ಕೆ ಅನುಮತಿ ನೀಡಲು ಯುನೈಟೆಡ್ ಅರಬ್ ಎಮಿರೇಟ್ಸ್ ನಿರ್ಧರಿಸಿದೆ.

ವೈದ್ಯಕೀಯ ಹೊಣೆಗಾರಿಕೆ ಕಾನೂನಿಗೆ ಸಂಬಂಧಿಸಿದ 2024ರ ಸಂಪುಟ ನಿರ್ಣಯವು `ಹೆಣ್ಣಿನ ಇಚ್ಛೆಗೆ ವಿರುದ್ಧವಾಗಿ ಅಥವಾ ಆಕೆಯ ಒಪ್ಪಿಗೆಯಿಲ್ಲದ ದೈಹಿಕ ಸಂಬಂಧದಲ್ಲಿ ಗರ್ಭವತಿಯಾಗಿದ್ದರೆ' ಗರ್ಭಪಾತಕ್ಕೆ' ಅವಕಾಶ ನೀಡಿದೆ ಎಂದು ಯುಎಇಯ ಸರಕಾರಿ ಸ್ವಾಮ್ಯದ `ದಿ ನ್ಯಾಷನಲ್' ಪತ್ರಿಕೆ ವರದಿ ಮಾಡಿದೆ.

ಅತ್ಯಾಚಾರದ ಘಟನೆಯನ್ನು ತಕ್ಷಣ ಅಧಿಕಾರಿಗಳಿಗೆ ವರದಿ ಮಾಡಬೇಕು ಮತ್ತು ಪಬ್ಲಿಕ್ ಪ್ರಾಸಿಕ್ಯೂಷನ್‍ನ ವರದಿಯಿಂದ ಸಾಬೀತುಪಡಿಸಬೇಕು. ಗರ್ಭಾವಸ್ಥೆಯನ್ನು 120 ದಿನದೊಳಗೆ ಕೊನೆಗೊಳಿಸಬೇಕು ಮತ್ತು ಮಹಿಳೆಯ ಜೀವಕ್ಕೆ ಅಪಾಯವುಂಟು ಮಾಡುವ ಯಾವುದೇ ವೈದ್ಯಕೀಯ ತೊಡಕುಗಳಿಂದ ಮುಕ್ತವಾಗಿರಬೇಕು' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News