×
Ad

ಗಾಝಾದಲ್ಲಿ ಮೃತಪಟ್ಟ ಮಕ್ಕಳ ಹೆಸರನ್ನು ಸಂಗೀತ ಉತ್ಸವದಲ್ಲಿ ಪ್ರದರ್ಶಿಸಿದ ಅಮೆರಿಕಾದ ರ‍್ಯಾಪರ್ ರೆಡ್ ವೀಲ್‌

Update: 2023-11-14 16:18 IST

Screengrab:X/@wholelottarei

ವಾಷಿಂಗ್ಟನ್: ಗಾಝಾ ಪಟ್ಟಿಯ ಫೆಲೆಸ್ತೀನಿಯನ್ನರ ಮೇಲೆ ಇಸ್ರೇಲಿ ಪಡೆಗಳು ನಡೆಸುತ್ತಿರುವ ಆಕ್ರಮಣಕ್ಕೆ ಅಮೆರಿಕದ ರ‍್ಯಾಪರ್ ರೆಡ್ ವೀಲ್‌ ಅವರು ತಮ್ಮ ಸಂಗೀತ ಪ್ರದರ್ಶನದಲ್ಲಿ ಬಹಿರಂಗವಾಗಿ ಖಂಡನೆ ವ್ಯಕ್ತಪಡಿಸಿದ್ದು, ಇಸ್ರೇಲ್‌ ದಾಳಿಯಿಂದ ಮಡಿದ ಮಕ್ಕಳ ಹೆಸರನ್ನು ಪ್ರದರ್ಶಿಸಿ, ಕದನ ವಿರಾಮಕ್ಕೆ ಕರೆ ನೀಡಿದ್ದಾರೆ.

ಕ್ಯಾಂಪ್ ಫ್ಲಾಗ್ ಗ್ನಾವ್ ಮ್ಯೂಸಿಕ್‌ ಕಾರ್ನಿವಲ್‌ನಲ್ಲಿ ತನ್ನ ಪ್ರದರ್ಶನ ನೀಡಿದ ರೆಡ್ ವೀಲ್‌ ಸಾವಿರಾರು ಪ್ರೇಕ್ಷಕರ ಸಮ್ಮುಖದಲ್ಲಿ ಫೆಲೆಸ್ತೀನ್‌ನಲ್ಲಿ ಕದನವಿರಾಮಕ್ಕೆ ಕರೆ ನೀಡಿದ್ದು, ʼಫೆಲೆಸ್ತೀನ್‌ ಸ್ವಂತಂತ್ರಗೊಳಿಸಿʼ (Free Palestine) ಎಂದು ವೇದಿಕೆ ಮೇಲೆ ಘೋಷಣೆ ಕೂಗಿದ್ದಾರೆ.

ರೆಡ್ ವೀಲ್‌ ಅವರು ಫೆಲೆಸ್ತೀನ್‌ಗೆ ಬೆಂಬಲಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್‌ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News