×
Ad

ಇಯು ಜತೆಗಿನ ಸಮನ್ವಯ ಬಲಪಡಿಸಲು ಸಿದ್ಧ: ಚೀನಾ

Update: 2023-11-29 21:55 IST

Photo: Canva

ಬೀಜಿಂಗ್: ಯುರೋಪಿಯನ್ ಯೂನಿಯನ್(ಇಯು) ಜತೆಗಿನ ಸಂವಹನ ಮತ್ತು ಸಮನ್ವಯವನ್ನು ಬಲಪಡಿಸಲು ಮತ್ತು ಚೀನಾ-ಇಯು ಶೃಂಗಸಭೆಗೆ ಸಿದ್ಧತೆಗಳನ್ನು ನಡೆಸಲು ಚೀನಾ ಸನ್ನದ್ಧವಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.

ಮಂಗಳವಾರ ಬೀಜಿಂಗ್ನಲ್ಲಿ ಯುರೋಪಿಯನ್ ಯೂನಿಯನ್ನ ವಿದೇಶ ವ್ಯವಹಾರ ವಿಭಾಗದ ಸಹಾಯಕ ಪ್ರಧಾನ ಕಾರ್ಯದರ್ಶಿ ಹಾಗೂ ಚೀನಾದ ಸಹಾಯಕ ವಿದೇಶಾಂಗ ಸಚಿವ ಸುನ್ ವೆಡಾಂಗ್ ನಡುವೆ ನಡೆದ ಸಭೆಯಲ್ಲಿ `ಎರಡೂ ಕಡೆಯವರು ಚೀನಾ-ಇಯು ಸಂಬಂಧಗಳ ಸಾಮಾನ್ಯ ದಿಕ್ಕನ್ನು ಗ್ರಹಿಸಬೇಕು, ಪರಸ್ಪರ ಲಾಭದಾಯಕ ಮತ್ತು ಇಬ್ಬರಿಗೂ ಪ್ರಯೋಜನವಾಗುವ ಸಹಕಾರವನ್ನು ಎತ್ತಿಹಿಡಿಯಬೇಕು ಮತ್ತು ಪರಸ್ಪರರ ಪ್ರಮುಖ ಹಿತಾಸಕ್ತಿಗಳನ್ನು ಸಂಪೂರ್ಣವಾಗಿ ಗೌರವಿಸಬೇಕು' ಎಂಬ ಬಗ್ಗೆ ಸಹಮತಕ್ಕೆ ಬರಲಾಗಿದೆ ಎಂದು ಜಂಟಿ ಹೇಳಿಕೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News