×
Ad

ಸಿರಿಯಾ ರಾಜಧಾನಿಗೆ ಬಂಡುಕೋರರ ಪ್ರವೇಶ ; ಅಧ್ಯಕ್ಷ ಬಶರ್ ಅಸ್ಸಾದ್ ಪಲಾಯನ

Update: 2024-12-08 10:38 IST

Photo : x/@WakeelMubariz

ಬೈರುತ್ : ಸಿರಿಯಾ ರಾಜಧಾನಿ ಡಮಾಸ್ಕಸ್‌ ಗೆ ಬಂಡುಕೋರರು ಪ್ರವೇಶಿಸುತ್ತಿದ್ದಂತೆ, ದೇಶದ ಅಧ್ಯಕ್ಷ ಬಶರ್ ಅಸ್ಸಾದ್ ಅವರು ಅಜ್ಞಾತ ಸ್ಥಳಕ್ಕೆ ಪಲಾಯನ ಮಾಡಿದ್ದಾರೆ ಎಂದು ಸಿರಿಯಾ ವಿರೋಧ ಪಕ್ಷದ ಯುದ್ಧ ನಿರ್ವಹಣೆ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

ಬಂಡುಕೋರರ ಪ್ರವೇಶದ ಬಳಿಕ ರಾಜಧಾನಿಯಲ್ಲಿ ಗುಂಡೇಟು ಮತ್ತು ಸ್ಫೋಟದ ಶಬ್ದಗಳು ಕೇಳಿಸುತ್ತಿವೆ ಎಂದು ಅಲ್ಲಿನ ನಿವಾಸಿಗಳು ವರದಿ ಮಾಡಿದ್ದಾರೆ. ಈ ಕುರಿತು ಸಿರಿಯಾ ಸರ್ಕಾರದಿಂದ ಯಾವುದೇ ತಕ್ಷಣದ ಹೇಳಿಕೆ ಬಂದಿಲ್ಲ.

ಅಸ್ಸಾದ್ ರವಿವಾರ ಮುಂಜಾನೆ ಡಮಾಸ್ಕಸ್‌ನಿಂದ ವಿಮಾನದ ಮೂಲಕ ಪಲಾಯನ ಮಾಡಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯದ ರಾಮಿ ಅಬ್ದುರ್ರಹ್ಮಾನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಂಡುಕೋರರು ರಾಜಧಾನಿಗೆ ಪ್ರವೇಶ ಪಡೆದ ಮಾಹಿತಿ ಬರುತ್ತಿದ್ದಂತೆ ಅಬ್ದುರ್ರಹ್ಮಾನ್ ಅವರು ಅಧ್ಯಕ್ಷ ಬಶರ್ ಅಸ್ಸಾದ್ ಅವರ ಪಲಾಯನ ಕುರಿತ ಮಾಹಿತಿ ಹಂಚಿಕೊಂಡಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News