×
Ad

ಕೆಂಪು ಸಮುದ್ರ: ತೈಲ ಟ್ಯಾಂಕರ್‍ ನತ್ತ ಹೌದಿಗಳ ಕ್ಷಿಪಣಿ ದಾಳಿ

Update: 2025-09-01 20:25 IST

ಸಾಂದರ್ಭಿಕ ಚಿತ್ರ | PC : PTI

ದುಬೈ, ಸೆ.1: ಕೆಂಪು ಸಮುದ್ರದಲ್ಲಿ ಸೌದಿ ಅರೆಬಿಯಾ ಕರಾವಳಿಯ ಸಮೀಪದಲ್ಲಿದ್ದ ತೈಲ ಟ್ಯಾಂಕರ್‍ ನತ್ತ ಕ್ಷಿಪಣಿ ದಾಳಿ ನಡೆಸಿರುವುದಾಗಿ ಯೆಮನ್‍ ನ ಹೌದಿ ಬಂಡುಕೋರ ಗುಂಪು ಸೋಮವಾರ ಹೇಳಿದೆ.

ಹೌದಿ ಮಿಲಿಟರಿಯ ವಕ್ತಾರ ಬ್ರಿ|ಜ| ಯಾಹ್ಯಾ ಸಾರಿ ಕ್ಷಿಪಣಿ ದಾಳಿಯ ಹೊಣೆ ವಹಿಸಿಕೊಂಡಿದ್ದು ಲೈಬೀರಿಯಾದ ಧ್ವಜ ಹೊಂದಿದ್ದ `ಸ್ಕಾರ್ಲೆಟ್ ರೇ' ಹಡಗು ಇಸ್ರೇಲ್‍ ನೊಂದಿಗೆ ಸಂಬಂಧ ಹೊಂದಿತ್ತು ಎಂದು ಪ್ರತಿಪಾದಿಸಿದ್ದಾರೆ.

ಸಿಂಗಾಪುರ ಮೂಲದ ಈಸ್ಟರ್ನ್ ಪೆಸಿಫಿಕ್ ಶಿಪ್ಪಿಂಗ್‍ ನ ಮಾಲಕತ್ವದ ಹಡಗು ಇಸ್ರೇಲ್‍ ನ ಕೋಟ್ಯಾಧಿಪತಿ ಉದ್ಯಮಿ ಇದಾನ್ ಓಫರ್‍ ನ ನಿಯಂತ್ರಣದಲ್ಲಿದೆ ಎಂದು ಕಡಲ ಭದ್ರತಾ ಸಂಸ್ಥೆ ಆಂಬ್ರೆಯ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News