×
Ad

ಕೇವಲ ತೈಲ ದರದ ವಿಷಯವಲ್ಲ: ಟ್ರಂಪ್ ಹೇಳಿಕೆಗೆ ರಶ್ಯ ಪ್ರತಿಕ್ರಿಯೆ

Update: 2025-01-24 20:45 IST

ಡೊನಾಲ್ಡ್ ಟ್ರಂಪ್ | PC : PTI

ಮಾಸ್ಕೋ: ತೈಲ ಬೆಲೆ ಇಳಿಕೆಯಾದರೆ ಉಕ್ರೇನ್ ಯುದ್ಧ ಅಂತ್ಯಗೊಳ್ಳುತ್ತದೆ ಎಂಬ ಟ್ರಂಪ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಶ್ಯ `ಸಂಘರ್ಷವು ತೈಲ ಬೆಲೆಗೆ ಸಂಬಂಧಿಸಿದ್ದಲ್ಲ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ' ಎಂದಿದೆ.

ಉಕ್ರೇನ್‍ ನಲ್ಲಿ ರಶ್ಯಕ್ಕೆ ಇರುವ ಸಮಸ್ಯೆಗಳು ರಾಷ್ಟ್ರೀಯ ಭದ್ರತೆ, ಅಲ್ಲಿ ಬದುಕುತ್ತಿರುವ ರಶ್ಯನ್ನರಿಗೆ ಎದುರಾಗಿರುವ ಬೆದರಿಕೆ ಹಾಗೂ ರಶ್ಯದ ಕಳವಳಗಳನ್ನು ಆಲಿಸಲು ಅಮೆರಿಕ ಮತ್ತು ಯುರೋಪ್‍ನ ನಿರಾಕರಣೆಗೆ ಸಂಬಂಧಿಸಿದ್ದಾಗಿದೆ. ಈ ಸಂಘರ್ಷವು ತೈಲ ದರವನ್ನು ಅವಲಂಬಿಸಿಲ್ಲ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಹೇಳಿರುವುದಾಗಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.

ಅಮೆರಿಕ ಅಧ್ಯಕ್ಷರ ಜತೆ ಮಾತುಕತೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಸಿದ್ಧವಿದ್ದಾರೆ. ಆದರೆ ಅಮೆರಿಕದಿಂದ `ಸಿಗ್ನಲ್'ಗಾಗಿ ಕಾಯುತ್ತಿದ್ದೇವೆ. ಪರಸ್ಪರ ಗೌರವಾನ್ವಿತ ಸಂಭಾಷಣೆಗೆ ರಶ್ಯ ಸಿದ್ಧವಿದೆ' ಎಂದು ಪೆಸ್ಕೋವ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News