ಇರಾನ್‍ಗೆ ಪರಮಾಣು ಸಿಡಿತಲೆಗಳನ್ನು ನೀಡಲು ಹಲವಾರು ದೇಶಗಳು ಸಿದ್ಧವಾಗಿವೆ: ರಶ್ಯ
Update: 2025-06-22 21:48 IST
PC : X
ಮಾಸ್ಕೋ: ಇರಾನ್‍ನ ಪರಮಾಣು ನೆಲೆಗಳ ಮೇಲಿನ ದಾಳಿಯಲ್ಲಿ ಇಸ್ರೇಲ್ ಜೊತೆ ಅಮೆರಿಕ ಸೇರಿಕೊಂಡ ಬಳಿಕ ಹಲವಾರು ದೇಶಗಳು ಇರಾನ್‍ಗೆ ಪರಮಾಣು ಸಿಡಿತಲೆಗಳನ್ನು ಒದಗಿಸಲು ಸಿದ್ಧವಾಗಿವೆ ಎಂದು ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವಡೇವ್ ಪ್ರತಿಪಾದಿಸಿದ್ದಾರೆ.
ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ ಅಮೆರಿಕ ಸೇರಿರುವುದು ಪಶ್ಚಿಮ ಏಶ್ಯಾದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು ಇರಾನ್ ಬಲವಾದ ಪ್ರತೀಕಾರ ಕ್ರಮದ ಪ್ರತಿಜ್ಞೆ ಮಾಡಿದೆ. ಮೂರು ಪರಮಾಣು ತಾಣಗಳ ಮೇಲಿನ ದಾಳಿಯು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಉದ್ದೇಶಕ್ಕೆ ವಿರುದ್ಧವಾದ ಪರಿಣಾಮಕ್ಕೆ ಕಾರಣವಾಗಲಿದೆ. ಪರಮಾಣು ಸಂಸ್ಕರಣೆ ಕಾರ್ಯ ಮುಂದುವರಿಯಲಿದೆ ಮತ್ತು ಮುಂದಿನ ದಿನಗಳಲ್ಲಿ ಪರಮಾಣು ಅಸ್ತ್ರಗಳ ಅಭಿವೃದ್ಧಿಯೂ ಮುಂದುವರಿಯಬಹುದು ಎಂದು ಮೆಡ್ವಡೇವ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮೆಡ್ವಡೇವ್ ರಶ್ಯದ ರಾಷ್ಟ್ರೀಯ ಭದ್ರತಾ ಮಂಡಳಿಯ ಅಧ್ಯಕ್ಷರಾಗಿ 2020ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.