×
Ad

ಮಹಾತ್ವಾಕಾಂಕ್ಷೆಯ ಚಂದ್ರಯಾನ ವಿಫಲ | ರಶ್ಯ ಬಾಹ್ಯಾಕಾಶ ಏಜೆನ್ಸಿ ಮುಖ್ಯಸ್ಥರ ವಜಾ

Update: 2025-02-06 22:28 IST

Photo - themoscowtimes

ಮಾಸ್ಕೋ: ಮಹಾತ್ವಾಕಾಂಕ್ಷೆಯ ಚಂದ್ರಯಾನ ವಿಫಲಗೊಂಡ ಬಳಿಕ ವ್ಯಾಪಕ ಟೀಕೆ ಎದುರಿಸುತ್ತಿದ್ದ ರಶ್ಯದ ಬಾಹ್ಯಾಕಾಶ ಏಜೆನ್ಸಿ ಮುಖ್ಯಸ್ಥ ಯೂರಿ ಬೊರಿಸೋವ್ರನ್ನು ವಜಾಗೊಳಿಸಿರುವುದಾಗಿ ಅಧ್ಯಕ್ಷರ ವಕ್ತಾರರು ಗುರುವಾರ ಹೇಳಿದ್ದಾರೆ.

2022ರ ಜುಲೈಯಿಂದ ರಶ್ಯ ಬಾಹ್ಯಾಕಾಶ ಏಜೆನ್ಸಿ ರೊಸ್ಕೋಸ್ಮಸ್ನ ಮುಖ್ಯಸ್ಥರಾಗಿರುವ ಯೂರಿ ಬೊರಿಸೋವ್ರನ್ನು ಹುದ್ದೆಯಿಂದ ಮುಕ್ತಗೊಳಿಸಲಾಗಿದೆ ಎಂದು ಹೇಳಿಕೆ ತಿಳಿಸಿದ್ದು ಇದಕ್ಕೆ ಕಾರಣ ನೀಡಿಲ್ಲ. ಸಹಾಯಕ ಸಾರಿಗೆ ಸಚಿವ ಡಿಮಿಟ್ರಿ ಬಕನೋವ್ರನ್ನು ಬೊರಿಸೋವ್ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ವರದಿಯಾಗಿದೆ.

1961ರಲ್ಲಿ ಸೋವಿಯತ್ ಗಗನಯಾತ್ರಿ ಯೂರಿ ಗಗಾರಿನ್ ಬಾಹ್ಯಾಕಾಶಕ್ಕೆ ಹೋದ ಮೊದಲ ವ್ಯಕ್ತಿ ಎಂಬ ದಾಖಲೆ ಬರೆದಾಗಿನಿಂದ ಬಾಹ್ಯಾಕಾಶ ಪರಿಶೋಧನೆಯಲ್ಲಿ ರಶ್ಯ ಪ್ರಮುಖ ಶಕ್ತಿಯಾಗಿ ಗುರುತಿಸಿಕೊಂಡಿದೆ. ಆದರೆ 2023ರಲ್ಲಿ ಮಾನವ ರಹಿತ ಚಂದ್ರಯಾನ ಯೋಜನೆಯಲ್ಲಿ ರಶ್ಯದ ಬಾಹ್ಯಾಕಾಶ ನೌಕೆ ಚಂದ್ರನಲ್ಲಿ ಇಳಿಯಲು ಪ್ರಯತ್ನಿಸಿದಾಗ ಚಂದ್ರನ ಮೇಲ್ಮೈಗೆ ಅಪ್ಪಳಿಸಿದ್ದರಿಂದ ಯೋಜನೆ ವಿಫಲಗೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News