×
Ad

ಉಕ್ರೇನ್ ಮೇಲೆ ಡ್ರೋನ್, ಕ್ಷಿಪಣಿ ಮಳೆಗರೆದ ರಶ್ಯ: ಪೈಲಟ್ ಮೃತ್ಯು, ವ್ಯಾಪಕ ಹಾನಿ

Update: 2025-06-29 22:20 IST

ಸಾಂದರ್ಭಿಕ ಚಿತ್ರ - AI

ಕೀವ್: ಉಕ್ರೇನ್ ಮೇಲೆ ಶನಿವಾರ ತಡರಾತ್ರಿಯಿಂದ ರಶ್ಯ ಡ್ರೋನ್ ಹಾಗೂ ಕ್ಷಿಪಣಿಗಳ ಸುರಿಮಳೆಗರೆದಿದ್ದು ಉಕ್ರೇನ್ ನ ಓರ್ವ ಪೈಲಟ್ ಸಾವನ್ನಪ್ಪಿದ್ದಾನೆ. ಕನಿಷ್ಠ 6 ಮಂದಿ ಗಾಯಗೊಂಡಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿರುವುದಾಗಿ ವರದಿಯಾಗಿದೆ.

ರಶ್ಯವು 477 ಡ್ರೋನ್‌ ಗಳು ಹಾಗೂ 60 ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಇದರಲ್ಲಿ 211 ಡ್ರೋನ್‌ ಗಳು ಹಾಗೂ 38 ಕ್ಷಿಪಣಿಗಳನ್ನು ಹೊಡೆದುರುಳಿಸಲಾಗಿದೆ. ದಾಳಿಯಲ್ಲಿ ಉಕ್ರೇನಿನ ಎಫ್-16 ಯುದ್ಧವಿಮಾನದ ಪೈಲಟ್ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಪಡೆ ಹೇಳಿದೆ.

ಕನಿಷ್ಠ 6 ಪ್ರಾಂತಗಳ ಮೇಲೆ ತೀವ್ರ ದಾಳಿ ನಡೆದಿದ್ದು ಮನೆಗಳು, ಮೂಲಸೌಕರ್ಯಗಳು ಮತ್ತು ಕೈಗಾರಿಕಾ ಸ್ಥಳಗಳಿಗೆ ಭಾರೀ ಹಾನಿ ಸಂಭವಿಸಿದೆ. ಲಿವಿವ್, ಪೊಲ್ಟಾವ, ಮಿಕೊಲೈವ್, ನಿಪ್ರೊಪೆಟ್ರೋವ್ಸ್ಕ್, ಚೆರ್ಕಸಿ ಮತ್ತು ಇವಾನೊ-ಫ್ರಾಂಕಿವ್ಸ್ಕ್ ನಗರಗಳಲ್ಲಿ ಸರಣಿ ಸ್ಫೋಟ ಸಂಭವಿಸಿದೆ. ಚೆರ್ಕಾಸಿಯಲ್ಲಿ ವೈಮಾನಿಕ ದಾಳಿಯಿಂದ ಬಹುಮಹಡಿ ಕಟ್ಟಡ ಹಾಗೂ ಕಾಲೇಜು ಕಟ್ಟಡಕ್ಕೆ ಹಾನಿಯಾಗಿದ್ದು ಮಗು ಸೇರಿದಂತೆ 6 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News