×
Ad

ರಶ್ಯನ್ ಸೇನಾ ವಿಮಾನ ಪತನ | 15 ಮಂದಿ ಮೃತ್ಯು

Update: 2024-03-12 22:48 IST

Photo : twitter

ಮಾಸ್ಕೊ : ರಶ್ಯದ ಸೇನಾ ಸರಕು ಸಾಗಣೆ ವಿಮಾನವೊಂದು ಮಂಗಳವಾಪರ ವಾಯುನೆಲೆಯಿಂದ ಟೇಕ್ಆಫ್ ಆಗುತ್ತಿದ್ದ ಸಂದರ್ಭದಲ್ಲಿ ಪತನಗೊಂಡು ಅದರಲ್ಲಿದ್ದ ಎಲ್ಲಾ 15 ಮಂದಿ ಸಾವನ್ನಪ್ಪಿದ್ದಾರೆ.

ಮಾಸ್ಕೊದಿಂದ 200 ಕಿ.ಮೀ. ಪೂರ್ವದಲ್ಲಿರುವ ಇವಾನಾವೊ ಪ್ರಾಂತದಲ್ಲಿ ಈ ಅವಘಡ ಸಂಭವಿಸಿದೆ. ಇಲ್ಯುಶಿನ್-76 ಎಂಬ ಹೆಸರಿನ ಸೇನಾ ಸರಕು ಸಾಗಣೆ ವಿಮಾನವು ವಾಯುನೆಲೆಯಿಂದ ಟೇಕ್ ಆಫ್ ಆಗುತ್ತಿದ್ದಾಗ ಅದರ ಇಂಜಿನ್ ಗೆ ಬೆಂಕಿ ತಗಲಿದೆಯೆಂದು ಮೂಲಗಳು ತಿಳಿಸಿವೆ.

ಉಕ್ರೇನ್ ವಿರುದ್ಧ ರಶ್ಯವು ಆಕ್ರಣವನ್ನು ಆರಂಭಿಸಿದಾಗಿನಿಂದ ರಶ್ಯ ಸೇನೆಯು ಆಗಸ ಹಾಗೂ ಭೂ ಮಾರ್ಗವಾಗಿ ಸೈನಿಕರು ಹಾಗೂ ಸೇನಾ ಸಾಮಾಗ್ರಿಗಳ ಸಾಗಾಟದಲ್ಲಿ ಭಾರೀ ಹೆಚ್ಚಳವಾಗಿದೆ. ಜನವರಿಯಲ್ಲಿ ಉಕ್ರೇನ್ ಸೇನೆಯು, ರಶ್ಯದ ಐಐ-76 ಸರಕುಸಾಗಣೆ ವಿಮಾನವನ್ನು ಹೊಡೆದುರುಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News