×
Ad

ರಶ್ಯ ದಾಳಿ | ಉಕ್ರೇನ್‍ನ 3 ರೆಡ್‍ಕ್ರಾಸ್ ಸಿಬ್ಬಂದಿ ಮೃತ್ಯು

Update: 2024-09-12 22:15 IST

ಸಾಂದರ್ಭಿಕ ಚಿತ್ರ | NDTV

ಕೀವ್ : ಪೂರ್ವ ಉಕ್ರೇನ್‍ನಲ್ಲಿ ರೆಡ್‍ಕ್ರಾಸ್ ವಾಹನಗಳ ಮೇಲೆ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ರೆಡ್‍ಕ್ರಾಸ್‍ನ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಗುರುವಾರ ಹೇಳಿದ್ದಾರೆ.

ಡೊನೆಟ್ಸ್ಕ್ ಪ್ರಾಂತದಲ್ಲಿ ಶತ್ರುಗಳು ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಮಿತಿಯ ಮಾನವೀಯ ನೆರವು ಕಾರ್ಯಾಚರಣೆಯ ವಾಹನದ ಮೇಲೆ ದಾಳಿ ನಡೆಸಿದ್ದಾರೆ ಎಂದು ಝೆಲೆನ್‍ಸ್ಕಿ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಚೂಣಿ ವಲಯದಲ್ಲಿ ನೆರವು ವಿತರಿಸುತ್ತಿದ್ದ ಮೂವರು ಸಿಬ್ಬಂದಿಗಳು ದಾಳಿಯಲ್ಲಿ ಮೃತಪಟ್ಟಿದ್ದು ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ. ನೆರವು ವಿತರಣಾ ವ್ಯವಸ್ಥೆಯ ಮೇಲೆ ದಾಳಿ ನಡೆಸುವುದು ಅಸಮಂಜಸವಾಗಿದೆ' ಎಂದು ಅಂತರಾಷ್ಟ್ರೀಯ ರೆಡ್‍ಕ್ರಾಸ್ ಸಮಿತಿ ಅಧ್ಯಕ್ಷ ಮಿರ್ಜಾನಾ ಸ್ಪೊಲ್ಜಾರಿಕ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News