×
Ad

ಬೆದರಿಸುವಿಕೆಯ ಧೋರಣೆಯಿಂದ ಭದ್ರತಾ ವ್ಯವಸ್ಥೆಗೆ ಸವಾಲು: ಕ್ಸಿ ಜಿಂಪಿಂಗ್

Update: 2025-09-01 20:55 IST

ಟಿಯಾಂಜಿನ್, ಸೆ.1: ಸದಸ್ಯ ರಾಷ್ಟ್ರಗಳು ಎದುರಿಸುತ್ತಿರುವ ಭದ್ರತೆ ಮತ್ತು ಅಭಿವೃದ್ಧಿ ಕಾರ್ಯಗಳು ಈಗ ಮತ್ತಷ್ಟು ಸವಾಲಾಗಿ ಪರಿಣಮಿಸಿದೆ. ಜಾಗತಿಕ ಕ್ರಮದಲ್ಲಿ ಕೆಲವೊಂದು ದೇಶಗಳು ಬೆದರಿಸುವ ಧೋರಣೆ ತೋರುತ್ತಿವೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಸೋಮವಾರ ಪರೋಕ್ಷವಾಗಿ ಅಮೆರಿಕದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚೀನಾದ ಟಿಯಾಂಜಿನ್ ನಗರದಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘ(ಎಸ್‍ಸಿಒ) ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಜಿಂಪಿಂಗ್ `ಜಾಗತಿಕ ಅಂತರಾಷ್ಟ್ರೀಯ ಪರಿಸ್ಥಿತಿ ಹೆಚ್ಚು ಅಸ್ತವ್ಯಸ್ತವಾಗಿದೆ ಮತ್ತು ಒಂದಕ್ಕೊಂದು ಬೆಸೆದುಕೊಂಡಿದೆ. ಪ್ರಪಂಚವು ಪ್ರಕ್ಷುಬ್ಧತೆ ಮತ್ತು ಪರಿವರ್ತನೆಗೆ ಒಳಗಾಗುತ್ತಿರುವ ಈ ಸಂದರ್ಭದಲ್ಲಿ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಾವು ಶಾಂಘೈ ಚೈತನ್ಯವನ್ನು ಅನುಸರಿಸುವುದನ್ನು ಮುಂದುವರಿಸಬೇಕು ಮತ್ತು ಎಸ್‍ಸಿಒದ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದರು.

ಚೀನಾವು 2025ರಲ್ಲಿ ಸದಸ್ಯ ರಾಷ್ಟ್ರಗಳಿಗೆ 276 ದಶಲಕ್ಷ ಡಾಲರ್ ಮೊತ್ತದ ಉಚಿತ ನೆರವು ಮತ್ತು ಎಸ್‍ಸಿಒ ಬ್ಯಾಂಕಿಂಗ್ ಒಕ್ಕೂಟಗಳಿಗೆ 10 ಶತಕೋಟಿ ಯುವಾನ್ (1 ಯುವಾನ್ ಎಂದರೆ 0.14 ಡಾಲರ್) ಸಾಲ ನೀಡಲಿದೆ ಎಂದು ಜಿಂಪಿಂಗ್ ಹೇಳಿದ್ದಾರೆ.

ಚೀನಾ, ಭಾರತ, ರಶ್ಯ, ಪಾಕಿಸ್ತಾನ, ಇರಾನ್, ಕಝಕ್‍ಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಬೆಲಾರುಸ್ ಶಾಂಘೈ ಸಹಕಾರ ಸಂಘದ ಸದಸ್ಯರಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News