×
Ad

ಕೊಳಚೆ ಪೈಪ್ ಒಡೆದು 33 ಅಡಿ ಎತ್ತರಕ್ಕೆ ಹೊರಚಿಮ್ಮಿದ ಮಲ ಸಹಿತ ತ್ಯಾಜ್ಯ; ವಿಡಿಯೋ ವೈರಲ್

Update: 2024-09-28 16:32 IST

Screengrab photo credit : indiatoday.in

ಚೀನಾ: ಚೀನಾದ ಜನಸಂದಣಿಯ ಹೆದ್ದಾರಿಯಲ್ಲಿ ಕೊಳಚೆ ನೀರಿನ ಪೈಪ್ಲೈನ್ ಒಡೆದು ಮಲ ಸಹಿತ ಕೊಳಚೆ ನೀರು 33 ಅಡಿ ಎತ್ತರಕ್ಕೆ ಹೊರಚಿಮ್ಮಿದ ವಿಲಕ್ಷಣ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ವಿಡಿಯೋದಲ್ಲಿ ದಕ್ಷಿಣ ಚೀನಾದ ಜನಸಂದಣಿ ರಸ್ತೆಯಲ್ಲಿ ಕೊಳಚೆನೀರಿನ ಪೈಪ್ಲೈನ್ ಒಡೆದು ಕೊಳಚೆ ನೀರು, ಮಲ ಹೊರಚಿಮ್ಮುವುದು ಕಂಡು ಬಂದಿದೆ. ರಸ್ತೆಯಲ್ಲಿ ತೆರಳುತ್ತಿದ್ದ ವಾಹನಗಳ ಗಾಜುಗಳು ಮಲಗಳಿಂದ ತುಂಬಿಕೊಂಡಿರುವುದು, ಪಾದಚಾರಿಗಳ ಮೇಲೆ ಕಲುಷಿತ ನೀರು, ಮಲ ಚಿಮ್ಮುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಒಳಚರಂಡಿ ಪೈಪ್ಗಳ ದುರಸ್ಥಿಯ ಭಾಗವಾಗಿ ಸ್ಥಳೀಯ ಇಂಜಿನಿಯರ್ಗಳು ಒತ್ತಡ ಪರೀಕ್ಷೆ ನಡೆಸುವ ವೇಳೆ ಈ ಘಟನೆ ಸಂಭವಿಸಿದೆ. ಘಟನೆಯ ನಂತರ ಸ್ಥಳಕ್ಕೆ ಅಧಿಕಾರಿಗಳು ದೌಡಾಯಿಸಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ ಎಂದು ʼದಿ ಸನ್ʼ ವರದಿ ಮಾಡಿದೆ.

ಕೊಳಚೆನೀರಿನ ಪೈಪ್ ಲೈನ್ ದಿಢೀರ್ ಸ್ಫೋಟದಿಂದಾಗಿ ಹಲವಾರು ವಾಹನಗಳಿಗೆ ಹಾನಿಯಾಗಿದೆ. ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ ಎಂದು ವರದಿ ತಿಳಿಸಿದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News