×
Ad

ಶೇಕ್ ಹಸೀನಾರನ್ನು ಹಸ್ತಾಂತರಿಸಲು ಭಾರತಕ್ಕೆ ಬಾಂಗ್ಲಾದೇಶ ಮನವಿ

Update: 2025-11-17 21:08 IST

 ಶೇಖ್ ಹಸೀನಾ |Photo Credit : PTI 

ಹೊಸದಿಲ್ಲಿ: ಬಾಂಗ್ಲಾದೇಶದ ನ್ಯಾಯಮಂಡಳಿಯೊಂದು ಪದಚ್ಯುತ ಪ್ರಧಾನಿ ಶೇಖ್ ಹಸೀನಾರಿಗೆ ಮರಣ ದಂಡನೆ ವಿಧಿಸಿರುವ ಬೆನ್ನಿಗೇ, ಅವರನ್ನು ಹಸ್ತಾಂತರಿಸುವಂತೆ ಆ ದೇಶದ ವಿದೇಶ ಸಚಿವಾಲಯವು ಭಾರತಕ್ಕೆ ಮನವಿ ಮಾಡಿದೆ.

ಬಾಂಗ್ಲಾದೇಶವು ಭಾರತದೊಂದಿಗೆ ಗಡೀಪಾರು ಒಪ್ಪಂದವನ್ನು ಹೊಂದಿದೆ ಎಂಬುದಾಗಿ ಎಂದು ಪತ್ರವೊಂದರಲ್ಲಿ ನೆನಪಿಸಿರುವ ಸಚಿವಾಲಯವು, ಹಸೀನಾ ಬಾಂಗ್ಲಾದೇಶಕ್ಕೆ ಮರಳುವಂತೆ ನೋಡಿಕೊಳ್ಳುವುದು ಭಾರತದ ಬದ್ಧತೆಯಾಗಿದೆ ಎಂದು ಹೇಳಿದೆ.

‘‘ದೇಶವೊಂದರಲ್ಲಿ, ಮಾನವತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ದೋಷಿಯಾಗಿರುವ ವ್ಯಕ್ತಿಗಳಿಗೆ ಆಶ್ರಯ ನೀಡುವುದು ಅತ್ಯಂತ ಸ್ನೇಹವಿರೋಧಿ ಕ್ರಮವಾಗಿದೆ ಹಾಗೂ ಅದು ನ್ಯಾಯಕ್ಕೆ ವಿರುದ್ಧವಾಗಿದೆ’’ ಎಂದು ಪತ್ರದಲ್ಲಿ ಹೇಳಲಾಗಿದೆ.

ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News