×
Ad

ಉಕ್ರೇನ್ ದಾಳಿಯಲ್ಲಿ ರಶ್ಯದ 5 ಮಂದಿ ಮೃತ್ಯು

Update: 2024-08-25 22:07 IST

ಕೀವ್ : ರಶ್ಯದ ಗಡಿಭಾಗದ ಬೆಲ್‌ಗೊರೊಡ್ ಪ್ರಾಂತದ ಮೇಲೆ ಉಕ್ರೇನ್ ನಡೆಸಿದ ಶೆಲ್ ದಾಳಿಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು ಇತರ 12 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ರವಿವಾರ ಹೇಳಿದ್ದಾರೆ.

ಉಕ್ರೇನ್ ಗಡಿಯ 38 ಕಿ.ಮೀ ದೂರದಲ್ಲಿರುವ ರಕಿಟೋನ್ ಗ್ರಾಮದ ಮೇಲೆ ಉಕ್ರೇನ್ ನಡೆಸಿದ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದು 12 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ 16 ವರ್ಷದ ಯುವತಿಯ ಸ್ಥಿತಿ ಗಂಭೀರವಾಗಿದೆ ಎಂದು ಪ್ರಾಂತದ ಗವರ್ನರ್ ವ್ಯಾಚೆಸ್ಲಾವ್ ಗ್ಲಾಡ್ಕೋವ್ ಹೇಳಿದ್ದಾರೆ.

ಉಕ್ರೇನ್‌ನ ಡೊನೆಟ್ಸ್ ಪ್ರಾಂತದ ಕ್ರಮಟರ‍್ಸ್ಕ್ ನಗರದ ಹೋಟೆಲ್‌ನ ಮೇಲೆ ರಶ್ಯ ನಡೆಸಿದ ವೈಮಾನಿಕ ದಾಳಿಯಲ್ಲಿ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದಾರೆ. ಹೋಟೆಲ್‌ನ ಭಾಗವೊಂದು ಕುಸಿದು ಬಿದ್ದಾಗ ಮತ್ತೊಬ್ಬ ಪತ್ರಕರ್ತ ಅದರಡಿ ಸಿಲುಕಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News