×
Ad

ಕೆನಡಾದಲ್ಲಿ ಗುಂಡಿನ ದಾಳಿ ; ಭಾರತೀಯ ಮೂಲದ ಇಬ್ಬರ ಮೃತ್ಯು

Update: 2023-11-11 22:36 IST

ಸಾಂದರ್ಭಿಕ ಚಿತ್ರ

ಒಟ್ಟಾವ : ಕೆನಡಾದ ಅಲ್ಬೆರ್ಟಾ ಪ್ರಾಂತದ ಎಡ್ಮಂಟನ್ ನಗರದಲ್ಲಿ ನಡೆದ ಶೂಟೌಟ್‍ನಲ್ಲಿ ಭಾರತೀಯ ಮೂಲದ ವ್ಯಕ್ತಿ ಹಾಗೂ ಅವರ 11 ವರ್ಷದ ಪುತ್ರ ಮೃತಪಟ್ಟಿರುವುದಾಗಿ ವರದಿಯಾಗಿದೆ.

ಎರಡು ಗ್ಯಾಂಗ್‍ಗಳ ನಡುವಿನ ಸಂಘರ್ಷ ಈ ಘಟನೆಗೆ ಮೂಲ ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ. ಎಡ್ಮಂಟನ್ ನಗರದ ಅಂಗಡಿಯೊಂದರ ಎದುರು ವಿರೋಧಿ ಗ್ಯಾಂಗ್ ನಡೆಸಿದ ಗುಂಡಿನ ದಾಳಿಯಲ್ಲಿ 41 ವರ್ಷದ ಹರ್‍ಪ್ರೀತ್ ಸಿಂಗ್ ಉಪ್ಪಲ್ ಮೃತಪಟ್ಟಿದ್ದಾರೆ. ಬಳಿಕ ಹಂತಕರು ಆತನ ಜತೆಗಿದ್ದ ಬಾಲಕನ ಮೇಲೂ ಗುಂಡಿಕ್ಕಿ ಪರಾರಿಯಾಗಿದ್ದು ತೀವ್ರ ಗಾಯಗೊಂಡ ಬಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ಎಡ್ಮಂಟನ್ ಪೊಲೀಸ್ ಸರ್ವಿಸ್‍ನ ಅಧಿಕಾರಿಗಳು ಹೇಳಿದ್ದಾರೆ. ಹರ್‍ಪ್ರೀತ್ ಸಿಂಗ್‍ನ ಹತ್ಯೆಗೆ ಈ ಹಿಂದೆಯೂ ಪ್ರಯತ್ನ ನಡೆದಿದ್ದು ಸಿಂಗ್ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News