ಮ್ಯಾನ್‌ಹಾಟನ್ ನಲ್ಲಿ ಗುಂಡಿನ ದಾಳಿ: ಪೊಲೀಸ್ ಸೇರಿ ಐವರು ಮೃತ್ಯು
ಶಂಕಿತ ದಾಳಿಕೋರ PC: x.com/ndccomputers
ಮ್ಯಾನ್‌ಹಾಟನ್: ಮ್ಯಾನ್‌ಹಾಟನ್ ಹೃದಯಭಾಗದಲ್ಲಿ ಸೋಮವಾರ ಸಂಜೆ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿ, ಶಂಕಿತ ದಾಳಿಕೋರ ಸೇರಿದಂತೆ ಐದು ಮಂದಿ ಮೃತಪಟ್ಟಿದ್ದಾರೆ. ಪಾರ್ಕ್ ಅವೆನ್ಯೂನಲ್ಲಿರುವ ಕಾರ್ಪೊರೇಟ್ ಕಚೇರಿ ಬಳಿ ಆಗಂತುಕ ಗುಂಡಿನ ದಾಳಿ ನಡೆಸಿದ ಎನ್ನಲಾಗಿದೆ.
"ನ್ಯೂಯಾರ್ಕ್ ಪೊಲೀಸ್ ಇಲಾಖೆಯ ಅಧಿಕಾರಿ ಸೇರಿದಂತೆ ನಾಲ್ಕು ಮಂದಿ ಇಂದಿನ ಮಿಡ್‌ಟೌ ನ್ ಮ್ಯಾನ್‌ಹಾಟನ್ ಶೂಟಿಂಗ್ ನಲ್ಲಿ ಮೃತಪಟ್ಟಿದ್ದಾರೆ" ಎಂದು ಪೊಲೀಸರು ಸಿಎನ್ಎನ್ ಗೆ ತಿಳಿಸಿದ್ದಾರೆ. ಶಂಕಿತ ದಾಳಿಕೋರ ಸ್ವಯಂ ಮಾಡಿಕೊಂಡ ಗಾಯದಿಂದ ಮೃತಪಟ್ಟಿದ್ದಾಗಿ ಅವರು ಹೇಳಿದ್ದಾರೆ.
ನೀಳ ಬಂದೂಕು ಹಿಡಿದುಕೊಂಡಿದ್ದ ಏಕೈಕ ದಾಳಿಕೋರ ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ನ್ಯೂಯಾರ್ಕ್ ಪೊಲೀಸ್ ಕಮಿಷನರ್ ಜೆಸಿಕಾ ಟಿಶ್ ಹೇಳಿದ್ದಾರೆ.
ಎಲ್ಎಫ್ಎಲ್ ಮತ್ತು ಬ್ಲ್ಯಾಕ್‌ಸ್ಟೋನ್ ಸೇರಿದಂತೆ ಪ್ರಮುಖ ಕಾರ್ಪೊರೇಟ್ ಕಚೇರಿಗಳಿರುವ ಸುಮಾರು 634 ಅಡಿ ಎತ್ತರದ ಗಗನಚುಂಬಿ 345 ಪಾರ್ಕ್ಅವೆನ್ಯೂನಲ್ಲಿ ಈ ದಾಳಿ ನಡೆದಿದೆ. ಅಧಿಕಾರಿ ನಡೆಸಿದ ಪ್ರತಿದಾಳಿಯಲ್ಲಿ ಗಾಯಗೊಂಡ ಒಬ್ಬ ನಾಗರಿಕನ ಸ್ಥಿತಿ ಗಂಭೀರವಾಗಿದೆ. ಮತ್ತೊಬ್ಬ ಉಳಿಯುವ ಸಾಧ್ಯತೆಯಿದೆ ಎಂದು ಅಧಿಕಾರಿ ವಿವರಿಸಿದ್ದಾರೆ. ಈ ಪ್ರದೇಶದಲ್ಲಿ ಅಡ್ಡಾಡದಂತೆ ನ್ಯೂಯಾರ್ಕ್ ಸಿಟಿ ಮೇಯರ್ ಎರಿಕ್ ಆ್ಯಡಮ್ಸ್ ಸಾರ್ವಜನಿಕರನ್ನು ಕೋರಿದ್ದಾರೆ.