×
Ad

ಅಮೆರಿಕದಲ್ಲಿ ಶೂಟೌಟ್ | 3 ಮಂದಿ ಮೃತ್ಯು ; 16 ಮಂದಿಗೆ ಗಾಯ

Update: 2024-07-22 20:59 IST

ಸಾಂದರ್ಭಿಕ ಚಿತ್ರ

ನ್ಯೂಯಾರ್ಕ್ : ಅಮೆರಿಕದ ಮಿಸಿಸಿಪ್ಪಿ ರಾಜ್ಯದಲ್ಲಿ ನೈಟ್‍ಕ್ಲಬ್ ಒಂದರ ಹೊರಗಡೆ ನಡೆದ ಗುಂಡಿನ ದಾಳಿ ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ರವಿವಾರ ಮಿಸಿಸಿಪ್ಪಿ ರಾಜ್ಯದ ಇಂಡಿಯಾನೋಲಾ ನಗರದ ಚರ್ಚ್‍ಸ್ಟ್ರೀಟ್‍ನ ನೈಟ್‍ಕ್ಲಬ್‍ನ ಹೊರಗಡೆ ನಿಂತಿದ್ದ ಜನರತ್ತ ಗುರುತಿಸಲಾಗದ ವ್ಯಕ್ತಿಯೊಬ್ಬ ಏಕಾಏಕಿ ಗುಂಡು ಹಾರಿಸಿದ್ದಾನೆ. ಗುಂಡೇಟಿನಿಂದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು ಇವರಲ್ಲಿ 19 ವರ್ಷದ ಮೂವರು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಸುಮಾರು 16 ಮಂದಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದು ಪತ್ತೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಇಂಡಿಯಾನೋಲಾ ಪೊಲೀಸ್ ಮುಖ್ಯಸ್ಥ ರೊನಾಲ್ಡ್ ಸ್ಯಾಂಪ್ಸನ್‍ರನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News