×
Ad

ಅಮೆರಿಕದಲ್ಲಿ ಶೂಟೌಟ್ | ಒಬ್ಬ ಮೃತ್ಯು ; 4 ಮಂದಿಗೆ ಗಾಯ

Update: 2024-04-01 22:37 IST

ವಾಷಿಂಗ್ಟನ್: ಅಮೆರಿಕದ ಟೆನ್ನಿಸಿ ರಾಜ್ಯದ ನ್ಯಾಷ್‍ವಿಲ್ ನಗರದ ರೆಸ್ಟೋರೆಂಟ್‍ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು ಇತರ 4 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ರೆಸ್ಟೋರೆಂಟ್‍ನಲ್ಲಿ ಈಸ್ಟರ್ ರವಿವಾರದ ಔತಣಕೂಟ ನಡೆಯುತ್ತಿದ್ದಾಗ ಅಲ್ಲಿಗೆ ನುಗ್ಗಿದ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾನೆ. ದಾಳಿಯಲ್ಲಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತರ 4 ಮಂದಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಂಕಿತ ಆರೋಪಿ ತನ್ನ ಕಾರಿನಲ್ಲಿ ಪರಾರಿಯಾಗುತ್ತಿರುವ ವೀಡಿಯೊ ಸ್ಥಳೀಯ ಸಿಸಿಟಿವಿಯಲ್ಲಿ ದಾಖಲಾಗಿದ್ದು ಅದನ್ನು ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಅಪ್‍ಲೋಡ್ ಮಾಡಿದ್ದು ಆರೋಪಿಯ ಮಾಹಿತಿಯಿದ್ದರೆ ತಿಳಿಸುವಂತೆ ಸೂಚಿಸಿದ್ದಾರೆ. ಶಂಕಿತನನ್ನು 46 ವರ್ಷದ ಆಂಟನ್ ರೂಕರ್ ಎಂದು ಗುರುತಿಸಲಾಗಿದ್ದು ಈತನ ವಿರುದ್ಧ ಮಾದಕ ವಸ್ತು ಸೇವಿಸಿ ಹಲ್ಲೆ ನಡೆಸಿದ ಬಗ್ಗೆ ಈ ಹಿಂದೆಯೇ ಪ್ರಕರಣ ದಾಖಲಾಗಿತ್ತು ಎಂದು ನ್ಯಾಷ್‍ವಿಲ್ ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News