×
Ad

ಗಾಝಾದಲ್ಲಿ ಇಸ್ರೇಲ್‌ ಕ್ರಮಗಳು ತಿರುಗುಬಾಣವಾಗಬಹುದು: ಬರಾಕ್‌ ಒಬಾಮ ಎಚ್ಚರಿಕೆ

Update: 2023-10-24 11:11 IST

ಬರಾಕ್‌ ಒಬಾಮ (PTI)

ವಾಷಿಂಗ್ಟನ್:‌ ಹಮಾಸ್‌ ವಿರುದ್ಧದ ಯುದ್ಧದಲ್ಲಿ ಗಾಝಾ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿ ಮತ್ತು ಆ ನಗರಕ್ಕೆ ನೀರು, ಆಹಾರ ಮುಂತಾದ ಮೂಲಭೂತ ಸೌಕರ್ಯಗಳ ಪೂರೈಕೆ ಸ್ಥಗಿತಗೊಳಿಸಿರುವುದು, ಫೆಲೆಸ್ತೀನೀಯರ ಧೋರಣೆಯನ್ನು ತಲೆಮಾರುಗಳ ಕಾಲ ಇನ್ನಷ್ಟು ಕಠಿಣವಾಗಿಸಬಹುದು ಮತ್ತು ಇಸ್ರೇಲ್‌ಗೆ ಅಂತರರಾಷ್ಟ್ರೀಯ ಬೆಂಬಲ ಕಡಿಮೆಗೊಳಿಸಬಹುದು ಎಂದು ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮ ಹೇಳಿದ್ದಾರೆ.

“ಮನುಕುಲದ ಮೇಲಿನ ಪರಿಣಾಮಗಳನ್ನು ನಿರ್ಲಕ್ಷಿಸುವ ಮಿಲಿಟರಿ ತಂತ್ರಗಾರಿಕೆಯು ಅಂತಿಮವಾಗಿ ಇಸ್ರೇಲ್‌ಗೆ ತಿರುಗುಬಾಣವಾಗಬಹುದು” ಎಂದು ಅಪರೂಪವೆಂಬಂತೆ ಒಬಾಮ ಅವರ ಪ್ರತಿಕ್ರಿಯೆ ಬಂದಿದೆ.

“ಗಾಝಾದ ಜನರಿಗೆ ಆಹಾರ, ನೀರು, ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸಲು ಇಸ್ರೇಲ್‌ ಸರಕಾರದ ನಿರ್ಧಾರವು ಅಲ್ಲಿನ ಬಿಕ್ಕಟ್ಟನ್ನು ತೀವ್ರಗೊಳಿಸಬಹುದು ಮತ್ತು ಈ ಪ್ರಾಂತ್ಯದಲ್ಲಿ ಶಾಂತಿ ಸ್ಥಿರತೆ ಕಾಪಾಡುವ ಯತ್ನಕ್ಕೆ ತೊಡಕಾಗಬಹುದು,” ಎಂದು ಒಬಾಮ ಹೇಳಿದ್ದಾರೆ.

ತಾವು ಅಧ್ಯಕ್ಷರಾಗಿದ್ದಾಗ ಫೆಲೆಸ್ತೀನ್‌ ವಿರುದ್ಧದ ಸಂಘರ್ಷದಲ್ಲಿ ಆತ್ಮರಕ್ಷಣೆಗೆ ಇಸ್ರೇಲ್‌ಗೆ ಇರುವ ಹಕ್ಕನ್ನು ಒಬಾಮ ಆರಂಭದಲ್ಲಿ ಸಮರ್ಥಿಸಿದ್ದರಾದರೂ ಇಸ್ರೇಲಿ ವಾಯುದಾಳಿಗಳಿಂದಾಗಿ ಫೆಲೆಸ್ತೀನ್‌ನಲ್ಲಿ ಸಾವು ನೋವುಗಳು ಅಧಿಕವಾಗುತ್ತಿದ್ದಂತೆಯೇ ಇಸ್ರೇಲ್‌ ದಾಳಿ ಕಡಿಮೆಗೊಳಿಸುವಂತೆ ಕರೆ ನೀಡುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News