×
Ad

ದಕ್ಷಿಣ ಆಫ್ರಿಕಾ ಅಧ್ಯಕ್ಷರಾಗಿ ರಮಾಫೋಸ ಪುನರಾಯ್ಕೆ ಖಚಿತ

Update: 2024-06-14 22:40 IST

ಸಿರಿಲ್ ರಮಾಫೋಸ | PC : PTI

ಕೇಪ್‍ಟೌನ್: ದೀರ್ಘಾವಧಿಯಿಂದ ತನ್ನ ರಾಜಕೀಯ ವಿರೋಧ ಪಕ್ಷವಾಗಿದ್ದ ಡೆಮೊಕ್ರಟಿಕ್ ಅಲಯನ್ಸ್ ಪಕ್ಷದ ಜತೆ ಮೈತ್ರಿ ಮಾಡಿಕೊಂಡಿರುವ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‍ಸಿ) ಪಕ್ಷದ ಮುಖಂಡ, ಹಾಲಿ ಅಧ್ಯಕ್ಷ ಸಿರಿಲ್ ರಮಾಫೋಸ ದಕ್ಷಿಣ ಆಫ್ರಿಕಾದ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗುವುದು ಖಚಿತವಾಗಿದೆ.

ಎರಡೂ ಪಕ್ಷಗಳ ಮೈತ್ರಿಕೂಟ ಬಹುಮತ ಪಡೆದಿದ್ದು ರಮಾಫೋಸ ಏಕೈಕ ಅಧ್ಯಕ್ಷೀಯ ಅಭ್ಯರ್ಥಿಯಾಗಿರುವುದರಿಂದ ಅವರು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News