×
Ad

ದ.ಕೊರಿಯಾ: ಚೂರಿ ಇರಿತಕ್ಕೆ ಒಬ್ಬ ಬಲಿ, ಮೂವರಿಗೆ ಗಾಯ ದ.ಕೊರಿಯಾ: ಚೂರಿ ಇರಿತಕ್ಕೆ ಒಬ್ಬ ಬಲಿ, ಮೂವರಿಗೆ ಗಾಯ

Update: 2023-07-21 23:09 IST

ಸಾಂದರ್ಭಿಕ ಚಿತ್ರ

ಸಿಯೋಲ್ : ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ನ ಸುರಂಗಮಾರ್ಗದ ಬಳಿ ವ್ಯಕ್ತಿಯೊಬ್ಬ ಚೂರಿಯಿಂದ ಮನಬಂದಂತೆ ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಇತರ ಮೂರು ಮಂದಿ ಗಾಯಗೊಂಡಿರುವುದಾಗಿ ಪೊಲೀಸರನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ.

ನೈಋತ್ಯ ಸಿಯೋಲ್ನ ಸಿಲಿಮ್ ಸುರಂಗನಿಲ್ದಾಣದಿಂದ ಹೊರಹೋಗುವ ದ್ವಾರದ ಬಳಿ ಶುಕ್ರವಾರ ಬೆಳಗ್ಗೆ 2 ಗಂಟೆಗೆ ಈ ಘಟನೆ ನಡೆದಿದೆ. ಸುಮಾರು 30 ವರ್ಷದ ವ್ಯಕ್ತಿಯೊಬ್ಬ ಏಕಾಏಕಿ ಚೂರಿಯಿಂದ ದಾಳಿ ನಡೆಸಿದಾಗ ಒಬ್ಬ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದೊಡನೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಬಂಧಿಸಲು ಮುಂದಾದಾಗ ಆರೋಪಿಯು `ನನಗೆ ಬದುಕಲು ಮನಸ್ಸಿಲ್ಲ' ಎಂದು ಕೂಗುತ್ತಿದ್ದ. ಹತ್ಯೆಗೆ ಕಾರಣ ಸ್ಪಷ್ಟವಾಗಿಲ್ಲ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News