×
Ad

ಶ್ರೀಲಂಕಾದ ಆರ್ಥಿಕ ಚೇತರಿಕೆ ಇನ್ನೂ ಖಚಿತವಾಗಿಲ್ಲ: ಐಎಂಎಫ್

Update: 2023-09-28 23:40 IST

Photo: PTI

ಕೊಲಂಬೊ, ಸೆ.28: ದಿವಾಳಿಯಾದ ಶ್ರೀಲಂಕಾದ ಆರ್ಥಿಕ ಚೇತರಿಕೆ ಇನ್ನೂ ಖಚಿತಗೊಂಡಿಲ್ಲ ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಶುಕ್ರವಾರ ಎಚ್ಚರಿಸಿದೆ.
ದ್ವೀಪರಾಷ್ಟ್ರದ ಹಣಕಾಸು ವ್ಯವಸ್ಥೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ನೀಡಲಾಗಿದ್ದ 2.9 ದಶಲಕ್ಷ ಡಾಲರ್ ಸಾಲದ ನೆರವಿನ ವಿನಿಯೋಗದ ಬಗ್ಗೆ ನಡೆದ ಪ್ರಥಮ ಅವಲೋಕನ ಸಭೆಯಲ್ಲಿ ಮಾತನಾಡಿದ ಐಎಂಎಫ್ ನಿಯೋಗದ ಸದಸ್ಯರು  `ಆಕಾಶದಷ್ಟು ಎತ್ತರಕ್ಕೆ ತಲುಪಿದ್ದ ಹಣದುಬ್ಬರವನ್ನು ನಿಯಂತ್ರಿಸಲು ಶ್ರೀಲಂಕಾ ಸಫಲವಾಗಿದ್ದರೂ ತನ್ನ ಆದಾಯದ ಗುರಿಗಳನ್ನು ಪೂರೈಸಲು ಮತ್ತು ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸ್ಥಿರೀಕರಣದ ಆರಂಭಿಕ ಚಿಹ್ನೆಗಳ ಹೊರತಾಗಿಯೂ ಸಂಪೂರ್ಣ ಆರ್ಥಿಕ ಚೇತರಿಕೆ ಇನ್ನೂ ಖಚಿತವಾಗಿಲ್ಲ' ಎಂದು ಹೇಳಿದ್ದಾರೆ.
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News