×
Ad

ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ಎಕ್ಸ್‌ ಸ್ಟಾರ್‌ಶಿಪ್‌ ರಾಕೆಟ್ ಹಿಂದೂ ಮಹಾಸಾಗರದಲ್ಲಿ ಪತನ

Update: 2025-05-28 11:51 IST

Photo: SpaceX

ವಾಷಿಂಗ್ಟನ್ : ಸ್ಪೇಸ್ಎಕ್ಸ್‌ನ ಸ್ಟಾರ್‌ಶಿಪ್‌ ಮೆಗಾ ರಾಕೆಟ್ ಹಿಂದೂ ಮಹಾಸಾಗರದಲ್ಲಿ ಪತನಗೊಂಡಿದೆ. ಇದರಿಂದ ಎಲಾನ್ ಮಸ್ಕ್ ನೇತೃತ್ವದ ಸ್ಪೇಸ್ಎಕ್ಸ್‌ಗೆ ಮತ್ತೆ ಹಿನ್ನೆಡೆಯಾಗಿದೆ.

ಆರಂಭದಲ್ಲಿ ಸ್ಟಾರ್‌ಶಿಪ್‌ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾದರೂ, ಸುಮಾರು ಅರ್ಧ ಗಂಟೆಯ ನಂತರ ಅದು ಸ್ಫೋಟಗೊಂಡಿದೆ ಎಂದು ವರದಿಯಾಗಿದೆ.

ಟೆಕ್ಸಾಸ್‌ನ ಸ್ಟಾರ್‌ಬೇಸ್‌ನಿಂದ ಸ್ಟಾರ್‌ಶಿಪ್‌ ಮೆಗಾ ರಾಕೆಟ್ ಅನ್ನು ಉಡಾಯಿಸಲಾಗಿತ್ತು. ಪ್ರಸ್ತುತ ಕಾರ್ಯಚರಣೆಯು ಸ್ಟಾರ್‌ಶಿಪ್‌ ಮೂರನೇಯ ಪೂರ್ಣ ಪ್ರಮಾಣದ ಪರೀಕ್ಷಾರ್ಥ ಹಾರಾಟವಾಗಿದೆ. ಮೊದಲ ಪರೀಕ್ಷೆಯಲ್ಲಿ, ಉಡಾವಣೆಯ ಕೆಲವೇ ನಿಮಿಷಗಳಲ್ಲಿ ರಾಕೆಟ್ ಸ್ಫೋಟಗೊಂಡಿತ್ತು. ಅದೇ ರೀತಿ ಎರಡನೇ ಪರೀಕ್ಷಾರ್ಥ ಉಡಾವಣೆಯಲ್ಲಿ ಬೂಸ್ಟರ್ ಮತ್ತು ನೌಕೆಯ ಬೇರ್ಪಡುವಿಕೆ ಯಶಸ್ವಿಯಾದರೂ ಎರಡೂ ಭಾಗಗಳು ನಂತರ ಸ್ಫೋಟಗೊಂಡಿದ್ದವು. ಈ ಬಾರಿಯ ಪರೀಕ್ಷೆಯಲ್ಲಿ ಸುಧಾರಣೆಗಳನ್ನು ಮಾಡಲಾಗಿತ್ತು. ಸ್ಟಾರ್‌ಶಿಪ್‌ ನೌಕೆಯು ಯಶಸ್ವಿಯಾಗಿ ಉಡಾವಣೆಯಾಗಿದೆ. ಆದರೆ, ಆ ಬಳಿಕ ವೈಫಲ್ಯ ಕಂಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News