×
Ad

ತೈವಾನ್‍ನಲ್ಲಿ ಮತ್ತೆ ಪ್ರಬಲ ಭೂಕಂಪನ; 24 ಗಂಟೆಯಲ್ಲಿ 2ನೇ ಕಂಪನ

Update: 2024-08-16 15:52 IST

   ಸಾಂದರ್ಭಿಕ ಚಿತ್ರ

ತೈಪೆ: ತೈವಾನ್‍ನ ಹ್ಯೂಲಿನ್ ನಗರದಿಂದ 34 ಕಿಲೋಮೀಟರ್ ದೂರದಲ್ಲಿ ಶುಕ್ರವಾರ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎಂದು ದ್ವೀಪರಾಷ್ಟ್ರದ ಆಡಳಿತ ಪ್ರಕಟಿಸಿದೆ. ಈ ಪ್ರಬಲ ಭೂಕಂಪನವು 24 ಗಂಟೆಯೊಳಗೆ ಸಂಭವಿಸಿದ ಎರಡನೇ ಭೂಕಂಪನವಾಗಿದೆ. ರಾಜಧಾನಿ ತೈಪೆಯ ಕಟ್ಟಡಗಳು ಕಂಪಿಸಿದ್ದು, ಸುರಂಗ ಮಾರ್ಗಗಳಲ್ಲಿ ನಿಧಾನವಾಗಿ ವಾಹನಗಳು ಚಲಿಸುವಂತೆ ಸೂಚಿಸಲಾಗಿದೆ ಎಂದು ರಾಯ್ಟರ್ಸ್ ವರದಿ ಮಾಡಿದೆ.

ಗುರುವಾರ ರಾತ್ರಿ ಥೈವಾನ್‍ನ ಈಶಾನ್ಯ ತೀರದಲ್ಲಿ 5.7 ತೀವ್ರತೆಯ ಭೂಕಂಪ 9.7 ಕಿಲೋಮೀಟರ್ ಆಳದಲ್ಲಿ ಸಂಭವಿಸಿತ್ತು. ಭೂಕಂಪನದ ಬಗ್ಗೆ ಸರ್ಕಾರ ಮುನ್ನೆಚ್ಚರಿಕೆಯನ್ನು ನೀಡಿದ್ದು, "ಸ್ವಲ್ಪದರಲ್ಲಿ ಪಾರಾದೆವು" ಎಂದು ಗಾಯಕಿ ಶೀ ಯು ವ್ಯೂ ಪ್ರತಿಕ್ರಿಯಿಸಿದ್ದಾರೆ.

ತಕ್ಷಣಕ್ಕೆ ಯಾವುದೇ ಹಾನಿಯ ಬಗ್ಗೆ ವಿವರಗಳು ಬಂದಿಲ್ಲ. ಮುಂದಿನ ದಿನಗಳಲ್ಲಿ ಸುಮಾರು 5.5 ತೀವ್ರತೆಯ ಕೆಲ ಕಂಪನಗಳು ಸಂಭವಿಸುವ ಸಾಧ್ಯತೆ ಇದೆ ಎಂದು ತಜ್ಞರು ಹೇಳಿದ್ದಾರೆ.

ಶುಕ್ರವಾರ ಮುಂಜಾನೆ ಸಂಭವಿಸಿದ ಭೂಕಂಪನದ ಬಳಿಕ ಹಲವು ಕಡಿಮೆ ತೀವ್ರತೆಯ ಕಂಪನಗಳು ವರದಿಯಾಗಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News