×
Ad

ಫೆಲೆಸ್ತೀನಿಯನ್ ಪರ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ವೀಸಾ ರದ್ದು: ಅಮೆರಿಕ

Update: 2025-01-30 22:44 IST

ಸಾಂದರ್ಭಿಕ ಚಿತ್ರ

ವಾಷಿಂಗ್ಟನ್: ಅಮೆರಿಕದಲ್ಲಿ ನಡೆದ ಫೆಲೆಸ್ತೀನ್ ಪರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾಗರಿಕರಲ್ಲದ ವಿದ್ಯಾರ್ಥಿಗಳು ಹಾಗೂ ಇತರರ ವಿದ್ಯಾರ್ಥಿ ವೀಸಾಗಳನ್ನು ರದ್ದುಗೊಳಿಸಿ ಅವರನ್ನು ಗಡೀಪಾರು ಮಾಡುವ ಕಾರ್ಯನಿರ್ವಾಹಕ ಆದೇಶಕ್ಕೆ ಡೊನಾಲ್ಡ್ ಟ್ರಂಪ್ ಸಹಿ ಹಾಕಲಿದ್ದು ಯೆಹೂದಿ ವಿರೋಧಿ ಅಭಿಯಾನವನ್ನು ಎದುರಿಸಲು ಅಮೆರಿಕ ಆಡಳಿತ ನಿರ್ಧರಿಸಿದೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.

`ಭಯೋತ್ಪಾದಕ ಬೆದರಿಕೆಗಳು, ಅಗ್ನಿಸ್ಪರ್ಷ, ವಿಧ್ವಂಸಕ ಕೃತ್ಯ ಮತ್ತು ಅಮೆರಿಕನ್ ಯೆಹೂದಿಗಳ ವಿರುದ್ಧ ಹಿಂಸಾಚಾರ' ಪ್ರಕರಣದಲ್ಲಿ ಕಾನೂನು ಕ್ರಮ ಜರಗಿಸಲು ಮತ್ತು 2023ರ ಅಕ್ಟೋಬರ್ 7ರಿಂದ ನಮ್ಮ ಕ್ಯಾಂಪಸ್ ಹಾಗೂ ರಸ್ತೆಗಳಲ್ಲಿ ಯೆಹೂದಿ ವಿರುದ್ಧ ಅಭಿಯಾನವನ್ನು ತಡೆಯಲು ನ್ಯಾಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಟ್ರಂಪ್ ಆದೇಶ ಜಾರಿಗೊಳಿಸಿದ್ದಾರೆ. ಫೆಲೆಸ್ತೀನಿಯನ್ ಪರ ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಲ್ಲರನ್ನೂ ನಾವು ಗಮನಿಸಿದ್ದೇವೆ. ಇದು 2025. ನಿಮ್ಮನ್ನು ಪತ್ತೆಹಚ್ಚಿ ಗಡೀಪಾರು ಮಾಡುತ್ತೇವೆ. ಕಾಲೇಜು ಕ್ಯಾಂಪಸ್‍ಗಳಲ್ಲಿನ ಎಲ್ಲಾ ಹಮಾಸ್ ಸಹಾನುಭೂತಿಗಳ ವಿದ್ಯಾರ್ಥಿ ವೀಸಾವನ್ನು ಬೇಗನೆ ರದ್ದುಗೊಳಿಸುತ್ತೇವೆ' ಎಂದು ಟ್ರಂಪ್ ಆದೇಶದಲ್ಲಿ ಉಲ್ಲೇಖಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಪ್ರಚಾರದಲ್ಲೂ ಟ್ರಂಪ್ ಈ ಭರವಸೆ ನೀಡಿದ್ದರು.

ಈ ಕ್ರಮವು ಸಾಂವಿಧಾನಿಕ ವಾಕ್‍ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಮತ್ತು ಕಾನೂನು ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಮಾನವ ಹಕ್ಕುಗಳ ಗುಂಪುಗಳು ಹಾಗೂ ಕಾನೂನು ತಜ್ಞರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News