×
Ad

ಸುಡಾನ್: ಅರೆ ಸೇನಾಪಡೆಯ ದಾಳಿಯಲ್ಲಿ ಕನಿಷ್ಠ 33 ಮಂದಿ ಮೃತ್ಯು

Update: 2025-05-10 21:19 IST

PC | NDTV

ಖಾರ್ಟೌಮ್: ಸೇನಾಪಡೆ ಮತ್ತು ಅರೆ ಸೇನಾಪಡೆಯ ನಡುವಿನ ಯುದ್ಧದಿಂದ ಜರ್ಝರಿತಗೊಂಡಿರುವ ಸುಡಾನ್‍ ನಲ್ಲಿ ಅರೆ ಸೇನಾಪಡೆ ನಡೆದ ದಾಳಿಯಲ್ಲಿ ಕನಿಷ್ಠ 33 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿರುವುದಾಗಿ ರಕ್ಷಣಾ ತಂಡ ಹೇಳಿದೆ.

ದಾರ್ಫುರ್ ಪ್ರಾಂತದಲ್ಲಿ ಸ್ಥಳಾಂತರಗೊಂಡವರು ನೆಲೆಸಿದ್ದ ಅಬು ಶೌಕ್ ಶಿಬಿರದ ಮೇಲೆ ಅರೆ ಸೇನಾಪಡೆ(ರ್ಯಾಪಿಡ್ ಸಪೋರ್ಟ್ ಫೋರ್ಸಸ್) ತೀವ್ರ ಡ್ರೋನ್ ದಾಳಿ ನಡೆಸಿದ್ದು ಒಂದೇ ಕುಟುಂಬದ ಕನಿಷ್ಠ 14 ಸದಸ್ಯರು ಮೃತಪಟ್ಟಿದ್ದು ಇತರ ಹಲವರು ಗಾಯಗೊಂಡಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ದಾರ್ಫುರ್ ಪ್ರಾಂತದ ರಾಜಧಾನಿ ಎಲ್-ಫಶರ್ ಹೊರತುಪಡಿಸಿ ಬಹುತೇಕ ಪ್ರದೇಶಗಳು ಅರೆ ಸೇನಾಪಡೆಯ ನಿಯಂತ್ರಣದಲ್ಲಿದೆ. ಎಲ್-ಫಾಶರ್ ನಗರಕ್ಕೆ ಅರೆ ಸೇನಾಪಡೆ ಮುತ್ತಿಗೆ ಹಾಕಿದ್ದು ಎಲ್-ಫಾಶರ್‍ನ ಹೊರವಲಯದಲ್ಲಿರುವ ಅಬು ಶೌಕ್ ಶಿಬಿರವನ್ನು ಗುರಿಯಾಗಿಸಿ ಕಳೆದ ಕೆಲವು ದಿನಗಳಿಂದ ಬಾಂಬ್ ದಾಳಿ ನಡೆಸುತ್ತಿದೆ ಎಂದು ವರದಿಯಾಗಿದೆ.

ಅಬು ಶೌಕ್ ಬಳಿಯಿರುವ ಝಮ್‍ಝಾಮ್ ನಿರಾಶ್ರಿತರ ಶಿಬಿರ ಪ್ರದೇಶವನ್ನು ಕಳೆದ ತಿಂಗಳು ಅರೆ ಸೇನಾಪಡೆ ವಶಪಡಿಸಿಕೊಂಡಿದೆ. ಸೇನಾಪಡೆಯ ನಿಯಂತ್ರಣದಲ್ಲಿರುವ ಎಲ್-ಒಬೈದ್ ನಗರದಲ್ಲಿನ ಜೈಲಿನ ಮೇಲೆ ಶನಿವಾರ ಅರೆ ಸೇನಾಪಡೆ ನಡೆಸಿದ ವೈಮಾನಿಕ ದಾಳಿಯಲ್ಲಿ 19 ಮಂದಿ ಸಾವನ್ನಪ್ಪಿದ್ದು 45 ಮಂದಿ ಗಾಯಗೊಂಡಿರುವುದಾಗಿ ವೈದ್ಯಕೀಯ ಮೂಲಗಳು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News