×
Ad

ಸುಡಾನ್ ರಾಜಧಾನಿಯ ನಿಯಂತ್ರಣ ಮರಳಿ ಪಡೆದುಕೊಂಡ ಸೇನಾಪಡೆ: ವರದಿ

Update: 2025-03-28 21:03 IST

PC : aljazeera.com

ಖಾರ್ಟೌಮ್: ರಾಜಧಾನಿ ಖಾರ್ಟೌಮ್ನ ಸಂಪೂರ್ಣ ನಿಯಂತ್ರಣವನ್ನು ಮರಳಿ ಪಡೆದಿರುವುದಾಗಿ ಸುಡಾನ್ ಸೇನಾಪಡೆಯ ಮೂಲಗಳು ದೃಢಪಡಿಸಿವೆ. ಕಳೆದ ವಾರ ಅಧ್ಯಕ್ಷರ ಅರಮನೆ, ವಿಮಾನ ನಿಲ್ದಾಣ ಸೇರಿದಂತೆ ಖಾರ್ಟೌಮ್ನ ಕೆಲವು ಭಾಗಗಳನ್ನು ಸೇನೆ ವಶಕ್ಕೆ ಪಡೆಯುವಲ್ಲಿ ಸಫಲವಾಗಿತ್ತು.

ಸುಡಾನ್ನಲ್ಲಿ 2023ರ ಎಪ್ರಿಲ್ನಿಂದ ಅಬ್ದೆಲ್ ಫತಾಹ್ ಅಲ್-ಬುರ್ಹಾನ್ ನೇತೃತ್ವದ ಸೇನಾಪಡೆ ಮತ್ತು ಮುಹಮ್ಮದ್ ಹಮ್ದನ್ ಡಗಾಲೊ ನೇತೃತ್ವದ ಅರೆ ಸೇನಾಪಡೆಯ ನಡುವೆ ಸಂಘರ್ಷ ಮುಂದುವರಿದಿದ್ದು ಸಂಘರ್ಷ ಆರಂಭಗೊಂಡ ಕೆಲವೇ ತಿಂಗಳಲ್ಲಿ ಅರೆ ಸೇನಾಪಡೆ ರಾಜಧಾನಿ ಖಾರ್ಟೌಮ್ ಮೇಲೆ ನಿಯಂತ್ರಣ ಸಾಧಿಸಿತ್ತು. `

ಖಾರ್ಟೌಮ್ ಪ್ರದೇಶದಲ್ಲಿದ್ದ ಡಗಾಲೊ ಭಯೋತ್ಪಾದಕ ಗುಂಪಿನ ಸದಸ್ಯರನ್ನು ನಮ್ಮ ಪಡೆಗಳು ಇವತ್ತು ಬಲವಂತವಾಗಿ ಹೊರದೂಡಿವೆ' ಎಂದು ಸೇನಾಪಡೆಯ ವಕ್ತಾರ ನಬಿಲ್ ಅಬ್ದುಲ್ಲಾ ಹೇಳಿದ್ದಾರೆ. ಅಧ್ಯಕ್ಷರ ಅರಮನೆಯ ಬಾಲ್ಕನಿಯಲ್ಲಿ ನಿಂತು ಜನರತ್ತ ಕೈ ಬೀಸಿದ ಅಧ್ಯಕ್ಷ ಅಲ್-ಬುರ್ಹಾನ್ `ರಾಜಧಾನಿಯು ಅರೆ ಸೇನಾಪಡೆಯ ಹಿಡಿತದಿಂದ ಮುಕ್ತವಾಗಿದೆ' ಎಂದು ಘೋಷಿಸಿದ್ದಾರೆ.

ಆದರೆ ತನ್ನ ಪಡೆಗಳು ಖಾರ್ಟೌಮ್ನಿಂದ ಪಲಾಯನ ಮಾಡಿಲ್ಲ ಮತ್ತು ಶರಣಾಗುವ ಪ್ರಶ್ನೆಯೇ ಇಲ್ಲ. ಯುದ್ಧದ ತಂತ್ರಗಾರಿಕೆಯ ಅಂಗವಾಗಿ ಖಾರ್ಟೌಮ್ನಿಂದ ಹಿಂದಕ್ಕೆ ಸರಿದು ನಗರದ ಹೊರವಲಯದಲ್ಲಿ ನೆಲೆಗಳನ್ನು ಭದ್ರಗೊಳಿಸಲಾಗಿದೆ ಮತ್ತು ಶೀಘ್ರವೇ ಪ್ರತಿದಾಳಿ ನಡೆಸಲಾಗುವುದು ಎಂದು ಅರೆ ಸೇನಾಪಡೆ ಘೋಷಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News