×
Ad

ಸಿರಿಯಾ: ರಕ್ಷಣಾ ಇಲಾಖೆಯ/ಕಾರ್ಯಾಚರಣೆ ಅಂತ್ಯ

Update: 2025-03-10 21:54 IST

ಸಾಂದರ್ಭಿಕ ಚಿತ್ರ | PC : NDTV

ದಮಾಸ್ಕಸ್: ಕರಾವಳಿ ಪ್ರಾಂತ್ಯದಲ್ಲಿ ನಡೆಯುತ್ತಿದ್ದ ಪ್ರಮುಖ ಭದ್ರತಾ ಕಾರ್ಯಾಚರಣೆಯನ್ನು ಕೊನೆಗೊಳಿಸಿರುವುದಾಗಿ ಸಿರಿಯಾದ ರಕ್ಷಣಾ ಇಲಾಖೆ ಸೋಮವಾರ ಘೋಷಿಸಿದೆ.

ಕಳೆದ ಗುರುವಾರದಿಂದ ಮುಂದುವರಿದ ಹಿಂಸಾಚಾರದಲ್ಲಿ ಸುಮಾರು 1,500 ಮಂದಿ ಮೃತಪಟ್ಟಿದ್ದಾರೆ. ಇದರಲ್ಲಿ ಹೆಚ್ಚಿನ ಸಾವು-ನೋವು ಅಲವೈಟ್ ಅಲ್ಪಸಂಖ್ಯಾತ ಸಮುದಾಯದವರು ವಾಸಿಸುತ್ತಿರುವ ಲಟಾಕಿಯಾ ಮತ್ತು ಟಾರ್ಟಸ್ ಪ್ರಾಂತಗಳಲ್ಲಿ ಸಂಭವಿಸಿರುವುದಾಗಿ ಮಾನವ ಹಕ್ಕುಗಳ ಸಿರಿಯಾ ಏಜೆನ್ಸಿಯ ವರದಿ ಹೇಳಿದೆ.

ಭದ್ರತೆಗೆ ಎದುರಾಗಿದ್ದ ಬೆದರಿಕೆಯನ್ನು ಭದ್ರತಾ ಪಡೆಗಳು ನಿಷ್ಕ್ರಿಯಗೊಳಿಸಿವೆ. ಈ ಉದ್ದೇಶ ಈಡೇರಿದ ಬಳಿಕ ನಮ್ಮ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಿರುವುದಾಗಿ ಘೋಷಿಸುತ್ತೇವೆ ಎಂದು ಸಿರಿಯಾ ರಕ್ಷಣಾ ಇಲಾಖೆಯ ವಕ್ತಾರ ಹಸನ್ ಅಬ್ದುಲ್ ಘನಿಯನ್ನು ಉಲ್ಲೇಖಿಸಿ ಸಿರಿಯಾದ ಸರ್ಕಾರಿ ಸ್ವಾಮ್ಯದ ಸನಾ ಸುದ್ದಿಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News