×
Ad

ಅಮೆರಿಕ ನಿರ್ಬಂಧ ತೆರವು ಸಕಾರಾತ್ಮಕ ಹೆಜ್ಜೆ: ಸಿರಿಯಾ

Update: 2025-05-24 21:05 IST

ಸಾಂದರ್ಭಿಕ ಚಿತ್ರ | PC : NDTV 

ಡಮಾಸ್ಕಸ್: ನಿರ್ಬಂಧಗಳನ್ನು ಅಮೆರಿಕ ಅಧಿಕೃತವಾಗಿ ತೆರವುಗೊಳಿಸಿರುವುದು ಸಕಾರಾತ್ಮಕ ನಡೆಯಾಗಿದ್ದು ಯುದ್ಧಾನಂತರದ ಚೇತರಿಕೆಗೆ ಸಹಾಯ ಮಾಡುತ್ತದೆ ಎಂದು ಸಿರಿಯಾ ಶನಿವಾರ ಶ್ಲಾಘಿಸಿದೆ.

ಸಿರಿಯಾ ಮತ್ತು ಅದರ ಜನರ ಮೇಲೆ ದೀರ್ಘಾವಧಿಯಿಂದ ವಿಧಿಸಿದ್ದ ನಿರ್ಬಂಧಗಳನ್ನು ತೆರವುಗೊಳಿಸುವ ಅಮೆರಿಕ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಈ ಕ್ರಮವು ದೇಶದಲ್ಲಿ ಮಾನವೀಯ ಮತ್ತು ಆರ್ಥಿಕ ಸಂಕಷ್ಟಗಳನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಸಿರಿಯಾದ ವಿದೇಶಾಂಗ ಸಚಿವಾಲಯ ಹೇಳಿದೆ. ಕಾರ್ಯನೀತಿಯಲ್ಲಿ ಗಮನಾರ್ಹ ಬದಲಾವಣೆಯ ದ್ಯೋತಕವಾಗಿ ಸಿರಿಯಾದ ಮೇಲಿನ ಸಮಗ್ರ ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಶುಕ್ರವಾರ ತೆರವುಗೊಳಿಸಿರುವುದು ಸಿರಿಯಾದ ಮರು ನಿರ್ಮಾಣ ಪ್ರಕ್ರಿಯೆಯಲ್ಲಿ ಅಮೆರಿಕದ ದಾರಿ ಮಾಡಿಕೊಟ್ಟಿದೆ. ನಿರ್ಬಂಧ ಸಡಿಲಿಕೆಯು ಸಿರಿಯಾದ ಹೊಸ ಸರಕಾರ ಭಯೋತ್ಪಾದಕ ಸಂಘಟನೆಗಳಿಗೆ ಸುರಕ್ಷಿತ ಧಾಮವನ್ನು ಒದಗಿಸುವುದಿಲ್ಲ ಮತ್ತು ಧಾರ್ಮಿಕ ಹಾಗೂ ಜನಾಂಗೀಯ ಅಲ್ಪಸಂಖ್ಯಾತರಿಗೆ ಭದ್ರತೆಯನ್ನು ಖಚಿತಪಡಿಸುತ್ತದೆ ಎಂಬ ಷರತ್ತುಗಳನ್ನು ಒಳಗೊಂಡಿದೆ ಎಂದು ಅಮೆರಿಕದ ಹಣಕಾಸು ಇಲಾಖೆ ಹೇಳಿದೆ. ನಿರ್ಬಂಧ ತೆರವು ಸಿರಿಯಾದ್ಯಂತ ವಿದ್ಯುತ್, ಇಂಧನ, ನೀರು ಹಾಗೂ ನೈರ್ಮಲ್ಯ ವ್ಯವಸ್ಥೆ ಒದಗಿಸಲು ಅನುಕೂಲವಾಗುತ್ತದೆ ಮತ್ತು ಹೆಚ್ಚು ಪರಿಣಾಮಕಾರೀ ಮಾನವೀಯ ಪ್ರತಿಕ್ರಿಯೆಗೆ ಪೂರಕವಾಗಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕ್ ರೂಬಿಯೊ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News