×
Ad

ಇಸ್ರೇಲ್ ದಾಳಿಯಲ್ಲಿ ಸಿರಿಯಾ ಯೋಧ ಮೃತ್ಯು

Update: 2024-07-14 21:45 IST

ಸಾಂದರ್ಭಿಕ ಚಿತ್ರ

ದಮಾಸ್ಕಸ್ : ರಾಜಧಾನಿ ದಮಾಸ್ಕಸ್ ನ ಮಿಲಿಟರಿ ನೆಲೆಗಳು ಹಾಗೂ ಜನವಸತಿ ಕಟ್ಟಡಗಳ ಮೇಲೆ ರವಿವಾರ ಬೆಳಿಗ್ಗೆ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಓರ್ವ ಯೋಧ ಮೃತಪಟ್ಟಿದ್ದು ಇತರ ಮೂವರು ಗಾಯಗೊಂಡಿರುವುದಾಗಿ ಸಿರಿಯಾ ಸೇನೆ ಹೇಳಿದೆ.

ಇಸ್ರೇಲ್ ಆಕ್ರಮಿತ ಗೋಲಾನ್ ಹೈಟ್ಸ್ ಪ್ರದೇಶದಿಂದ ದಾಳಿ ನಡೆದಿದೆ. ದಕ್ಷಿಣ ಪ್ರಾಂತದ ಹಲವಾರು ಮಿಲಿಟರಿ ನೆಲೆಗಳು ಹಾಗೂ ದಮಾಸ್ಕಸ್ನ ಕಾಫರ್ ಸಾವುಸ್ ಪ್ರದೇಶದ ವಸತಿ ಕಟ್ಟಡವನ್ನು ಗುರಿಯಾಗಿಸಿ ದಾಳಿ ನಡೆದಿದೆ. ಹಲವು ಕ್ಷಿಪಣಿಗಳನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಸಿರಿಯಾ ಸೇನೆ ಹೇಳಿದೆ. ಶನಿವಾರ ಸಿರಿಯಾದಿಂದ ಇಸ್ರೇಲ್ನ ಎಲಾಟ್ ಕಡೆಗೆ ಎರಡು ಡ್ರೋನ್ಗಳನ್ನು ಉಡಾಯಿಸಿರುವುದಕ್ಕೆ ಪ್ರತೀಕಾರ ಕ್ರಮ ಇದಾಗಿದೆ. ಇಸ್ರೇಲ್ ಭದ್ರತಾ ಪಡೆಯ ದಾಳಿಯಲ್ಲಿ ಸಿರಿಯಾ ಮಿಲಿಟರಿ ಕಮಾಂಡ್ ಕೇಂದ್ರ ಮತ್ತು ಸಿರಿಯಾ ಮಿಲಿಟರಿಯ ವಾಯು ರಕ್ಷಣಾ ಘಟಕ(ಇರಾನ್ ಮೂಲದ ಸಶಸ್ತ್ರ ಹೋರಾಟಗಾರರ ಗುಂಪು ನಿರ್ವಹಿಸುವ)ಕ್ಕೆ ಹಾನಿಯಾಗಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News