×
Ad

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ಬೆದರಿಕೆ ಅಂತ್ಯಕ್ಕೆ ತಲುಪಿದೆ: ಟ್ರಂಪ್

“ಹಡಗಿನ ಮೇಲೆ ದಾಳಿ ಮಾಡಿದರೆ ಪರಿಣಾಮಗಳು ಗಂಭೀರವಾಗಿರುತ್ತವೆ”

Update: 2026-03-10 05:03 IST

ಸಾಂದರ್ಭಿಕ ಚಿತ್ರ | Photo Credit : NDTV

ವಾಷಿಂಗ್ಟನ್: ಇರಾನ್ ಮತ್ತು ಅದರ ಬೆಂಬಲಿತ ಗುಂಪುಗಳಿಂದ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳಿಗೆ ಎದುರಾಗುತ್ತಿರುವ ಬೆದರಿಕೆಯನ್ನು ಅಂತ್ಯಗೊಳಿಸುವ ಹಂತಕ್ಕೆ ಅಮೆರಿಕ ತಲುಪಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಸಾಗುವ ಹಡಗುಗಳಿಗೆ ಇರುವ ಅಪಾಯವನ್ನು ನಿವಾರಿಸುವ ಕ್ರಮಗಳನ್ನು ಅಮೆರಿಕ ಕೈಗೊಂಡಿದ್ದು, ಇದರ ಪರಿಣಾಮವಾಗಿ ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆಗಳು ಇಳಿಕೆಯಾಗಲಿವೆ ಎಂದು ಅವರು ತಿಳಿಸಿದ್ದಾರೆ.

ಕೊಲ್ಲಿಯಲ್ಲಿ ಸಂಚರಿಸುತ್ತಿರುವ ತೈಲ ಟ್ಯಾಂಕರ್ಗಳಿಗೆ ಅಮೆರಿಕ ರಾಜಕೀಯ ಅಪಾಯ ವಿಮೆಯನ್ನು ಒದಗಿಸುತ್ತಿದೆ. ಅವುಗಳ ಭದ್ರತೆಗಾಗಿ ಅಮೆರಿಕದ ಮಿಲಿಟರಿಯು ಟ್ಯಾಂಕರ್ ಗಳೊಂದಿಗೆ ಸಾಗುವ ಸಾಧ್ಯತೆಯೂ ಇದೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ರಕ್ಷಣೆಯೊಂದಿಗೆ ಸಾಗುತ್ತಿರುವ ಹಡಗುಗಳ ಮೇಲೆ ಇರಾನ್ ದಾಳಿ ನಡೆಸಿದರೆ ಅದರ ಪರಿಣಾಮಗಳು “ಲೆಕ್ಕ ಹಾಕಲಾಗದಷ್ಟು ಗಂಭೀರವಾಗಿರುತ್ತವೆ” ಎಂದು ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News