ಮಧ್ಯಪ್ರಾಚ್ಯ ಸಂಘರ್ಷ | ಇರಾನ್‌ನ ಶಾಲೆ, ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕದಿಂದ ಕ್ಷಿಪಣಿ ದಾಳಿ
Update: 2026-03-10 10:03 IST
ಸಾಂದರ್ಭಿಕ ಚಿತ್ರ | X/@jurgen_nauditt
ಟೆಹ್ರಾನ್ : ಇರಾನ್‌ನಲ್ಲಿ ಶಾಲೆ ಮತ್ತು ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಮತ್ತೆ ದಾಳಿ ಮಾಡಿರುವ ಬಗ್ಗೆ Aljazeera ವರದಿ ಮಾಡಿದೆ.
ಇರಾನ್‌ನ ಖೊಮೇನ್ ನಗರದಲ್ಲಿರುವ ಡಾ. ಹಫೀಝ್ ಖೊಮೇನಿ ಶಾಲೆ ಮೇಲೆ ಅಮೆರಿಕ ಕ್ಷಿಪಣಿ ದಾಳಿ ನಡೆಸಿದೆ ಎಂದು ಇರಾನ್‌ನ Mehr news agency ವರದಿ ಮಾಡಿದೆ.
ಶಾಲೆಯನ್ನು ಗುರಿಯಾಗಿಸಿಕೊಂಡು ನಡೆದ ದಾಳಿಯಲ್ಲಿ ಸುತ್ತಮುತ್ತಲಿನ ಅನೇಕ ಮನೆಗಳಿಗೆ ಕೂಡ ಹಾನಿಯಾಗಿರುವುದಾಗಿ ವರದಿಯು ಉಲ್ಲೇಖಿಸಿದೆ. ದಾಳಿಯಲ್ಲಿ ಮೃತಪಟ್ಟವರ ಬಗ್ಗೆ ತಕ್ಷಣಕ್ಕೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಈ ಮೊದಲು ದಕ್ಷಿಣ ಇರಾನ್‌ನ ಮಿನಾಬ್ ನಗರದಲ್ಲಿರುವ ಬಾಲಕಿಯರ ಶಾಲೆಯ ಮೇಲೆ ಅಮೆರಿಕ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 170 ಮಂದಿ ಮೃತಪಟ್ಟಿದ್ದರು. ಅವರಲ್ಲಿ ಹೆಚ್ಚಿನವರು ಮಕ್ಕಳಾಗಿದ್ದರು.