×
Ad

ಭಯೋತ್ಪಾದಕ ದಾಳಿ: ಇರಾನ್ ಭದ್ರತಾ ಪಡೆಯ 11 ಯೋಧರ ಸಾವು

Update: 2024-04-04 23:46 IST

ಟೆಹ್ರಾನ್: ದೇಶದ ಆಗ್ನೇಯ ಪ್ರಾಂತದ ಸಿಸ್ತಾನ್-ಬಲುಚಿಸ್ತಾನ್ನಲ್ಲಿ ಇರಾನ್ನ ರೆವೊಲ್ಯುಷನರಿ ಗಾಡ್ರ್ಸ್(ಐಆರ್ಜಿ) ಕೇಂದ್ರಕಚೇರಿಯ ಮೇಲೆ ಗುರುವಾರ ನಡೆದ ಎರಡು ಪ್ರತ್ಯೇಕ ಭಯೋತ್ಪಾದಕ ದಾಳಿಯಲ್ಲಿ ಇರಾನ್ ಭದ್ರತಾ ಪಡೆಯ 11 ಯೋಧರು ಸಾವನ್ನಪ್ಪಿದ್ದು ಇತರ 10 ಅಧಿಕಾರಿಗಳು ಗಾಯಗೊಂಡಿರುವುದಾಗಿ ವರದಿಯಾಗಿದೆ.

ಐಆರ್ಜಿ ಕೇಂದ್ರಕಚೇರಿಯನ್ನು ವಶಕ್ಕೆ ಪಡೆಯುವ ಭಯೋತ್ಪಾದಕರ ಉದ್ದೇಶ ವಿಫಲವಾಗಿದೆ ಎಂದು ಇರಾನ್ನ ಆಂತರಿಕ ಇಲಾಖೆ ಮಾಹಿತಿ ನೀಡಿದೆ.

ಇದಕ್ಕೂ ಮುನ್ನ, ಬುಧವಾರ ತಡರಾತ್ರಿ ಇರಾನ್ನ ಚಬಹಾರ್ ಮತ್ತು ರಾಸ್ಕ್ ನಗರಗಳಲ್ಲಿ ಜೈಷ್ ಅಲ್ಅದಿಲ್ ಗುಂಪಿನ ಸಶಸ್ತ್ರ ಹೋರಾಟಗಾರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಕನಿಷ್ಟ 15 ಹೋರಾಟಗಾರರು ಹತರಾಗಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News