ಟೆಕ್ಸಾಸ್ ಪ್ರವಾಹ: ಮೃತರ ಸಂಖ್ಯೆ 109ಕ್ಕೆ ಏರಿಕೆ
Update: 2025-07-09 22:10 IST
PC : X
ನ್ಯೂಯಾರ್ಕ್: ಅಮೆರಿಕದ ಟೆಕ್ಸಾಸ್ನಲ್ಲಿ ಧಾರಾಕಾರ ಮಳೆ ಮತ್ತು ದಿಢೀರ್ ಪ್ರವಾಹದಿಂದ ಸಾವನ್ನಪ್ಪಿದವರ ಸಂಖ್ಯೆ 109ಕ್ಕೇರಿದ್ದು 160ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.
ಕೆರ್ ಕೌಂಟಿಯಲ್ಲಿ ಅತೀ ಹೆಚ್ಚು ಸಾವು-ನೋವು ಸಂಭವಿಸಿದ್ದು ಕನಿಷ್ಠ 94 ಮಂದಿ ಸಾವನ್ನಪ್ಪಿದ್ದಾರೆ. ಕಳೆದ ಐದು ದಿನಗಳಿಂದ ಶೋಧ ಮತ್ತು ರಕ್ಷಣಾ ಕಾರ್ಯ ಮುಂದುವರಿದಿದ್ದು ಇನ್ನೂ 160ಕ್ಕೂ ಹೆಚ್ಚು ಮಂದಿಯ ಪತ್ತೆಯಾಗಿಲ್ಲ. ಸಾವು-ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಗವರ್ನರ್ ಗ್ರೆಗ್ ಅಬೋಟ್ ಹೇಳಿದ್ದಾರೆ. ಹೆಲಿಕಾಪ್ಟರ್, ಡ್ರೋನ್ ಗಳು ಹಾಗೂ ಶ್ವಾನಗಳನ್ನು ಶೋಧ ಕಾರ್ಯಾಚರಣೆಗೆ ಬಳಸಲಾಗಿದ್ದು ರಾಶಿಬಿದ್ದಿರುವ ಕಸಕಡ್ಡಿ, ಕಲ್ಲು ಮಣ್ಣುಗಳು ಕಾರ್ಯಾಚರಣೆಗೆ ತೊಡಕಾಗಿದೆ. ಈ ಮಧ್ಯೆ, ನ್ಯೂ ಮೆಕ್ಸಿಕೋದ ರುಯ್ಡೊಸೊದಲ್ಲಿ ರಿಯೊ ರುಯ್ಡೊಸೊ ನದಿಯ ನೀರು ಏಕಾಏಕಿ ಹೆಚ್ಚುತ್ತಿದ್ದು ದಿಢೀರ್ ಪ್ರವಾಹದ ಮುನ್ನೆಚ್ಚರಿಕೆಯನ್ನು ರಾಷ್ಟ್ರೀಯ ಹವಾಮಾನ ಇಲಾಖೆ ನೀಡಿದೆ.