×
Ad

ಥೈಲ್ಯಾಂಡ್: ಬಸ್ಸು ಪಲ್ಟಿಯಾಗಿ 18 ಸಾವು; 31 ಮಂದಿಗೆ ಗಾಯ

Update: 2025-02-26 20:50 IST

ಸಾಂದರ್ಭಿಕ ಚಿತ್ರ 

ಬ್ಯಾಂಕಾಕ್: ಪೂರ್ವ ಥೈಲ್ಯಾಂಡ್‍ನ ಪ್ರಚಿನ್‍ ಬುರಿ ಪ್ರಾಂತದಲ್ಲಿ ಬುಧವಾರ ಬೆಳಿಗ್ಗೆ ಬಸ್ಸೊಂದು ಕಂದಕಕ್ಕೆ ಉರುಳಿಬಿದ್ದು 18 ಮಂದಿ ಮೃತಪಟ್ಟಿದ್ದಾರೆ ಮತ್ತು 31 ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಪುರಸಭೆ ಅಧ್ಯಯನಕ್ಕಾಗಿ ತಂಡವೊಂದು ಉತ್ತರ ಥೈಲ್ಯಾಂಡ್‍ನಿಂದ ಕರಾವಳಿಯ ರೆಯಾಂಗ್ ಪ್ರಾಂತಕ್ಕೆ ಪ್ರಯಾಣಿಸುತ್ತಿದ್ದ ಬಸ್ಸು ಅಪಘಾತಕ್ಕೆ ಒಳಗಾಗಿದೆ. ಇಳಿಜಾರು ರಸ್ತೆಯಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ಸು ಪಲ್ಟಿಯಾಗಿ ರಸ್ತೆ ಪಕ್ಕದ ಕಮರಿಗೆ ಉರುಳಿದೆ. ಬಸ್ಸಿನಲ್ಲಿ ಚಾಲಕನ ಸಹಿತ 49 ಜನರಿದ್ದರು. ಗಾಯಗೊಂಡವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News