×
Ad

ಥೈಲ್ಯಾಂಡ್: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 18 ಮಂದಿ ಸಾವು

Update: 2024-01-17 20:33 IST

Photo : twitter

ಬ್ಯಾಂಕಾಕ್: ಮಧ್ಯ ಥೈಲ್ಯಾಂಡ್‍ನ ಪಟಾಕಿ ತಯಾರಿಸುವ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಟ 18 ಮಂದಿ ಸಾವನ್ನಪ್ಪಿರುವುದಾಗಿ ರಕ್ಷಣಾ ತಂಡದ ಅಧಿಕಾರಿ ಹೇಳಿದ್ದಾರೆ.

ಸುಫಾನ್ ಬುರಿ ಪ್ರಾಂತದ ಸಲಾ ಖಾವೊ ನಗರದಲ್ಲಿರುವ ಪಟಾಕಿ ಕಾರ್ಖಾನೆಯಲ್ಲಿ ಮಧ್ಯಾಹ್ನ 3 ಗಂಟೆ ವೇಳೆ ಸ್ಫೋಟ ಸಂಭವಿಸಿದ್ದು 18 ಮಂದಿ ಮೃತಪಟ್ಟಿರುವುದು ಇದುವರೆಗೆ ದೃಢಪಟ್ಟಿದೆ. ಕೆಲವರು ಗಂಭೀರವಾಗಿ ಗಾಯಗೊಂಡಿದ್ದು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಅಗ್ನಿಶಾಮಕ ದಳದವರು ಇತರ ಕಟ್ಟಡ ಅಥವಾ ಮನೆಗಳಿಗೆ ಹರಡದಂತೆ ಬೆಂಕಿಯನ್ನು ನಿಯಂತ್ರಿಸಿದ್ದು ಸ್ಫೋಟಕ್ಕೆ ಕಾರಣ ಸ್ಪಷ್ಟವಾಗಿಲ್ಲ ಎಂದು ಪೊಲೀಸ್ ಮುಖ್ಯಸ್ಥ ಧೀರಪೊಜ್ ರವಂಗ್‍ಬಾನ್‍ರನ್ನು ಉಲ್ಲೇಖಿಸಿದ ಮಾಧ್ಯಮ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News