×
Ad

ಥೈಲ್ಯಾಂಡ್‍ನ `ರಾಷ್ಟ್ರಮಾತೆ' ಸಿರಿಕಿಟ್ ನಿಧನ

Update: 2025-10-25 20:43 IST

ರಾಣಿ ಸಿರಿಕಿಟ್ | credit : aljazeera.com

ಬ್ಯಾಂಕಾಕ್, ಅ.25: ಥೈಲ್ಯಾಂಡಿನ ರಾಷ್ಟ್ರಮಾತೆ ಎಂದೇ ಗೌರವಿಸಲ್ಪಡುತ್ತಿದ್ದ ಮಾಜಿ ರಾಣಿ ಸಿರಿಕಿಟ್ (93 ವರ್ಷ) ನಿಧನರಾಗಿರುವುದಾಗಿ ಸರಕಾರದ ಮೂಲಗಳು ಹೇಳಿವೆ.

ಥೈಲ್ಯಾಂಡಿನ ಹಾಲಿ ರಾಜ ವಜ್ರಲೊಂಗ್‍ಕೊರ್ನ್ ಅವರ ತಾಯಿ ಸಿರಿಕಿಟ್ ಅವರ ಜನ್ಮದಿನವನ್ನು ದೇಶದಾದ್ಯಂತ ತಾಯಿಯ ದಿನವನ್ನಾಗಿ ಆಚರಿಸಲಾಗುತ್ತದೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು 2019ರಿಂದಲೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನದ ಹಿನ್ನೆಲೆಯಲ್ಲಿ ಒಂದು ವರ್ಷ ಶೋಕಾಚರಣೆ ಜಾರಿಯಲ್ಲಿರುತ್ತದೆ ಎಂದು ಅರಮನೆಯ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News