×
Ad

ಅಮೆರಿಕ |ನರ್ಸಿಂಗ್ ವಿದ್ಯಾರ್ಥಿನಿಯ ಹತ್ಯೆ; ಆರೋಪಿಯ ಬಂಧನ

Update: 2024-02-24 22:23 IST

ನ್ಯೂಯಾರ್ಕ್: ಅಮೆರಿಕದ ಜಾರ್ಜಿಯಾ ವಿವಿಯ ಕ್ಯಾಂಪಸ್‍ನಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದಲ್ಲಿ ಶಂಕಿತ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

ಲೇಕನ್‍ಹೋಪ್ ರಿಲೆ (22 ವರ್ಷ) ಎಂಬ ವಿದ್ಯಾರ್ಥಿನಿ ಜಾರ್ಜಿಯಾ ವಿವಿ ಕ್ಯಾಂಪಸ್‍ನ ಬಳಿಯ ಕ್ರೀಡಾಂಗಣದಲ್ಲಿ ಗುರುವಾರ ಬೆಳಿಗ್ಗೆ ಜಾಗಿಂಗ್ ಮಾಡಲು ತೆರಳಿದ ಸಂದರ್ಭ ನಾಪತ್ತೆಯಾಗಿರುವ ಬಗ್ಗೆ ಆಕೆಯ ಸ್ನೇಹಿತೆ ದೂರು ನೀಡಿದ್ದಳು. ಜಾರ್ಜಿಯಾ ವಿವಿಯಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ಬಳಿಕ ಈಕೆ ಆಗಸ್ಟಾ ಯುನಿವರ್ಸಿಟಿ ಕಾಲೇಜ್ ಆಫ್ ನರ್ಸಿಂಗ್‍ನ ವಿದ್ಯಾರ್ಥಿನಿಯಾಗಿದ್ದಳು.

ಈಕೆಯ ಮೃತದೇಹ ಶುಕ್ರವಾರ ವಿವಿಯ ಕ್ಯಾಂಪಸ್‍ನಲ್ಲಿ ಪೊದೆಗಳ ನಡುವೆ ಪತ್ತೆಯಾಗಿದ್ದು ಈಕೆಯ ದೇಹದ ಮೇಲೆ ಗಾಯದ ಗುರುತುಗಳಿದ್ದವು. ವಿವಿ ಕ್ಯಾಂಪಸ್‍ನ ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಆಧರಿಸಿ ಶಂಕಿತ ಜೋಸ್ ಅಂಟೋನಿಯೊ ಇಬಾರಾ ಎಂಬಾತನನ್ನು ಬಂಧಿಸಿ ಅಪಹರಣ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News