×
Ad

ಫಲಿತಾಂಶ ಈಗಲೇ ಊಹಿಸಬಹುದು: ಪುಟಿನ್ ಸ್ಪರ್ಧೆಗೆ ಅಮೆರಿಕ ಲೇವಡಿ

Update: 2023-12-09 23:25 IST

ವ್ಲಾದಿಮಿರ್‌ ಪುಟಿನ್‌ (PTI)

ವಾಶಿಂಗ್ಟನ್ : ಮತ್ತೆ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತೇನೆ ಎಂದು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಮೆರಿಕ, ಫಲಿತಾಂಶವನ್ನು ಈಗಲೇ ಊಹಿಸಬಹುದು ಎಂದು ಲೇವಡಿ ಮಾಡಿದೆ.

2024ರಲ್ಲಿ ನಡೆಯುವ ರಶ್ಯ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸುವ ಪುಟಿನ್ ಘೋಷಣೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ `ರೇಸ್ನಲ್ಲಿ ಏಕೈಕ ಅದ್ಭುತ, ಶ್ರೇಷ್ಟ, ಅಸಾಧಾರಣ ವ್ಯಕ್ತಿ ಇರುವಾಗ ಫಲಿತಾಂಶವು ಸಂದೇಹಕ್ಕೆ ಒಳಗಾಗುವ ಸಾಧ್ಯತೆಯಿಲ್ಲ' ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಪ್ರತಿಕ್ರಿಯಿಸಿದ್ದಾರೆ. ಪುಟಿನ್ ಮತ್ತೆ ಅಧ್ಯಕ್ಷರಾಗದಂತೆ ತಡೆಯುವ ಅಗತ್ಯವಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಳೆದ ವಾರ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News