×
Ad

ಫೆಲೆಸ್ತೀನೀಯರು ಗಾಝಾದಿಂದ ನಿರ್ಗಮಿಸಲು `ಅವಕಾಶ'ವಿದೆ: ಇಸ್ರೇಲ್

Update: 2025-08-13 23:05 IST

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು

ಜೆರುಸಲೇಂ, ಆ.13: ಗಾಝಾ ಪಟ್ಟಿಯಿಂದ ನಿರ್ಗಮಿಸಲು ಫೆಲೆಸ್ತೀನೀಯರಿಗೆ ಇಸ್ರೇಲ್ ಅವಕಾಶ ನೀಡಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಗಾಝಾದಲ್ಲಿ ಆಕ್ರಮಣವನ್ನು ವ್ಯಾಪಕಗೊಳಿಸಲು ಮಿಲಿಟರಿ ಸಿದ್ಧತೆ ನಡೆಸುತ್ತಿರುವಂತೆಯೇ ಇಸ್ರೇಲ್‍ ನ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನೆತನ್ಯಾಹು `ನಾವು ಅವರನ್ನು ಹೊರಗೆ ತಳ್ಳುತ್ತಿಲ್ಲ. ಅವರು ಹೊರಗೆ ತೆರಳಲು ಅವಕಾಶ ನೀಡುತ್ತೇವೆ' ಎಂದು ಹೇಳಿರುವುದಾಗಿ ವರದಿಯಾಗಿದೆ. ಮೊದಲು ಯುದ್ಧ ವಲಯದಿಂದ, ಕ್ರಮೇಣ ಈ ಪ್ರದೇಶದಿಂದ ತೆರಳಲು ಅವರಿಗೆ ಅವಕಾಶ ನೀಡಬೇಕು. ಯುದ್ಧದ ಸಂದರ್ಭ ಮೊದಲು ಗಾಝಾ ನಗರದಿಂದ, ಬಳಿಕ ಸಂಪೂರ್ಣ ಪ್ರದೇಶದಿಂದ ಹೊರತೆರಳಲು ಅವರಿಗೆ ಅವಕಾಶವಿದೆ' ಎಂದು ನೆತನ್ಯಾಹು ಹೇಳಿದ್ದು ಸಿರಿಯಾ, ಉಕ್ರೇನ್ ಮತ್ತು ಅಫ್ಘಾನಿಸ್ತಾನದಲ್ಲಿ ಯುದ್ಧದ ಸಂದರ್ಭ ನಿರಾಶ್ರಿತರ ಸ್ಥಳಾಂತರವನ್ನು ಉಲ್ಲೇಖಿಸಿರುವುದಾಗಿ ವರದಿಯಾಗಿದೆ. ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಹಲವು ವರ್ಷಗಳಿಂದ ಗಡಿಗಳನ್ನು ಬಿಗಿಯಾಗಿ ನಿಯಂತ್ರಿಸಿದ್ದು ಹಲವರನ್ನು ಹೊರಹೋಗದಂತೆ ನಿರ್ಬಂಧಿಸಿದೆ.

`ಅಮೆರಿಕವು ಗಾಝಾದ ನಿಯಂತ್ರಣವನ್ನು ಪಡೆಯಬೇಕು ಮತ್ತು ಅಲ್ಲಿನ 2.4 ದಶಲಕ್ಷ ನಿವಾಸಿಗಳನ್ನು ಈಜಿಪ್ಟ್ ಮತ್ತು ಜೋರ್ಡಾನ್‍ ಗೆ ಸ್ಥಳಾಂತರಿಸಬೇಕು' ಎಂದು ಈ ವರ್ಷದ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ `ಗಾಝಾದ ಜನಸಂಖ್ಯೆಯನ್ನು ಸ್ವೀಕರಿಸುವ ತೃತೀಯ ರಾಷ್ಟ್ರವನ್ನು ಗುರುತಿಸಲು ತನ್ನ ಸರಕಾರ ಕಾರ್ಯನಿರ್ವಹಿಸುತ್ತಿದೆ' ಎಂದು ನೆತನ್ಯಾಹು ಕೂಡಾ ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News