×
Ad

ಟ್ರಾವೆಲ್ ಏಜೆಂಟ್ ಬೃಜೇಶ್ ಮಿಶ್ರಾಗೆ ಫೆಬ್ರವರಿವರೆಗೆ ಕಸ್ಟಡಿ ವಿಧಿಸಿದ ಕೆನಡಾ

Update: 2023-12-18 22:34 IST

Photo: Canva

ಟೊರಂಟೊ: ಕೆನಡಾದ ಶಿಕ್ಷಣ ಸಂಸ್ಥೆಗಳಲ್ಲಿ ಪಂಜಾಬ್‍ನ ಹಲವು ವಿದ್ಯಾರ್ಥಿಗಳಿಗೆ ಪ್ರವೇಶ ದೊರಕಿಸಲು ನಕಲಿ ದಾಖಲೆ ಬಳಸಿದ ಆರೋಪಕ್ಕೆ ಸಂಬಂಧಿಸಿ, ಕೆನಡಾದಲ್ಲಿ ಸೆರೆಯಾಗಿರುವ ಭಾರತೀಯ ವಲಸೆ ಏಜೆಂಟ್ ಬೃಜೇಶ್ ಮಿಶ್ರಾ ಮುಂದಿನ ವರ್ಷ ಫೆಬ್ರವರಿಯಲ್ಲಿ ವಿಚಾರಣೆ ಪ್ರಾರಂಭವಾಗುವವರೆಗೆ ಕಸ್ಟಡಿಯಲ್ಲಿ ಇರುತ್ತಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಜೂನ್‍ನಲ್ಲಿ ಬಂಧಿಸಲ್ಪಟ್ಟಿರುವ ಮಿಶ್ರಾ ಕೌನ್ಸೆಲಿಂಗ್ ಅಕ್ರಮ, ಅನಧಿಕೃತ ಪ್ರಾತಿನಿಧ್ಯ ಸೇರಿದಂತೆ 5 ಆರೋಪಗಳನ್ನು ಎದುರಿಸುತ್ತಿದ್ದು ಇದುವರೆಗೆ ಜಾಮೀನು ನಿರಾಕರಿಸಲ್ಪಟ್ಟಿದೆ. `ಅವರ ಮುಂದಿನ ವಿಚಾರಣೆ 2024ರ ಫೆಬ್ರವರಿ 9ರಂದು ನಡೆಯಲಿದ್ದು ಆಗ ಅವರು ಅರ್ಜಿ ಸಲ್ಲಿಸಬಹುದು ಎಂದು ಕೆನಡಾ ಗಡಿ ಸೇವಾ ಏಜೆನ್ಸಿ(ಸಿಬಿಎಸ್‍ಎ)ಯ ಅಧಿಕಾರಿಗಳು ಹೇಳಿದ್ದಾರೆ. ನವೆಂಬರ್ 9ರಂದು ಟೊರಂಟೋದ ವಲಸೆ ನ್ಯಾಯಮಂಡಳಿಯ ವಿಚಾರಣೆಯಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದ ಮಿಶ್ರಾ, ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು ಎಂದು ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News