×
Ad

ಅಮೆರಿಕ ಚುನಾವಣೆಯಲ್ಲಿ ಬ್ರಿಟನ್‍ನ ಲೇಬರ್ ಪಾರ್ಟಿ ಹಸ್ತಕ್ಷೇಪ : ದೂರು ದಾಖಲಿಸಿದ ಟ್ರಂಪ್

Update: 2024-10-23 21:39 IST

ಡೊನಾಲ್ಡ್ ಟ್ರಂಪ್ | PC : PTI 

ವಾಷಿಂಗ್ಟನ್ : ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬ್ರಿಟನ್‍ನ ಲೇಬರ್ ಪಕ್ಷವು ಬಹಿರಂಗವಾಗಿ ಹಸ್ತಕ್ಷೇಪ ನಡೆಸುತ್ತಿದೆ. ಅವರು ಕಮಲಾ ಹ್ಯಾರಿಸ್ ಚುನಾವಣೆಯಲ್ಲಿ ಗೆಲ್ಲಲು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಡರಲ್ ಚುನಾವಣಾ ಆಯೋಗ(ಎಫ್‍ಇಸಿ)ಕ್ಕೆ ದೂರು ಸಲ್ಲಿಸಿದ್ದಾರೆ.

ಈ ವಾರದ ಆರಂಭದಲ್ಲಿ ಸಲ್ಲಿಸಲಾದ ದೂರಿನಲ್ಲಿ ಲೇಬರ್ ಪಾರ್ಟಿ ಮತ್ತು ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಪ್ರಚಾರ ತಂಡದ ನಡುವಿನ ಅಸಮರ್ಪಕ ಸಮನ್ವಯಕ್ಕೆ ಮಾಧ್ಯಮ ವರದಿಗಳು ಹಾಗೂ ಸಾಮಾಜಿಕ ಮಾಧ್ಯಮ ಚಟುವಟಿಕೆಯನ್ನು ಸಾಕ್ಷಿಯಾಗಿಸಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಲೇಬರ್ ಪಕ್ಷದ ಕಾರ್ಯಕರ್ತರು ವೈಯಕ್ತಿಕ ಹಿತಾಸಕ್ತಿಯ ಕಾರಣಕ್ಕೆ ಪ್ರಚಾರ ಮಾಡುತ್ತಿರುವುದಾಗಿ ಬಿಬಿಸಿ ಅಭಿಪ್ರಾಯಪಟ್ಟಿದೆ ಎಂದು ಟ್ರಂಪ್ ಪ್ರಚಾರ ತಂಡ ಹೇಳಿದೆ.

ದೂರಿನ ಪ್ರಕಾರ `ಲೇಬರ್ ಪಾರ್ಟಿಯ ಹಿರಿಯ ತಂತ್ರಜ್ಞರು ಹ್ಯಾರಿಸ್ ಪ್ರಚಾರ ತಂಡವನ್ನು ಭೇಟಿ ಮಾಡಿದ್ದಾರೆ. ಜತೆಗೆ, ಲೇಬರ್ ಪಕ್ಷದ ಸುಮಾರು 100 ಕಾರ್ಯಕರ್ತರು ಹ್ಯಾರಿಸ್ ಪರ ಪ್ರಚಾರ ಮಾಡಲು ಅಮೆರಿಕದ ಪ್ರಮುಖ ರಾಜ್ಯಗಳಿಗೆ ಪ್ರಯಾಣಿಸಲು ಯೋಜಿಸಿದ್ದಾರೆ ಎಂದು ಲೇಬರ್ ಪಕ್ಷದ ಅಧಿಕಾರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಚಟುವಟಿಕೆಗಳು ಅಮೆರಿಕ ಚುನಾವಣಾ ಪ್ರಕ್ರಿಯೆಯಲ್ಲಿ ವಿದೇಶಿ ಹಸ್ತಕ್ಷೇಪವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News