ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಲು ಹಾರ್ವರ್ಡ್ ವಿವಿ ನಿರ್ಧಾರ
Update: 2025-05-23 20:44 IST
ಟ್ರಂಪ್ | PC : NDTV
ನ್ಯೂಯಾರ್ಕ್ : ವಿದೇಶಿ ವಿದ್ಯಾರ್ಥಿಗಳ ದಾಖಲಾತಿಯನ್ನು ನಿರ್ಬಂಧಿಸಿದ್ದಕ್ಕಾಗಿ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ದಾಖಲಿಸಲು ಹಾರ್ವರ್ಡ್ ವಿಶ್ವವಿದ್ಯಾಲಯ ನಿರ್ಧರಿಸಿರುವುದಾಗಿ ವರದಿಯಾಗಿದೆ.
ಈ ಕಾನೂನುಬಾಹಿರ ಮತ್ತು ಅನಗತ್ಯ ಕ್ರಮವನ್ನು ನಾವು ಖಂಡಿಸುತ್ತೇವೆ. ಇದು ಹಾರ್ವಡ್ ವಿವಿಯಾದ್ಯಂತದ ಸಾವಿರಾರು ವಿದ್ಯಾರ್ಥಿಗಳು ಮತ್ತು ವಿದ್ವಾಂಸರ ಭವಿಷ್ಯವನ್ನು ಅಪಾಯಕ್ಕೆ ಒಳಪಡಿಸುತ್ತದೆ ಮತ್ತು ತಮ್ಮ ಶಿಕ್ಷಣವನ್ನು ಮುಂದುವರಿಸಲು ಮತ್ತು ತಮ್ಮ ಕನಸುಗಳನ್ನು ಈಡೇರಿಸಲು ಅಮೆರಿಕಕ್ಕೆ ಬಂದಿರುವ ಅಸಂಖ್ಯಾತ ಇತರರಿಗೆ ಎಚ್ಚರಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ. ಇದನ್ನು ವಿರೋಧಿಸಿ ನಾವು ದೂರು ದಾಖಲಿಸಿದ್ದು ಸರಕಾರದ ಆದೇಶಕ್ಕೆ ತಾತ್ಕಾಲಿಕ ನಿರ್ಬಂಧ ಕೋರಿದ್ದೇವೆ' ಎಂದು ಹಾರ್ವರ್ಡ್ ವಿವಿ ಅಧ್ಯಕ್ಷ ಡಾ. ಅಲನ್ ಎಂ. ಗಾರ್ಬರ್ ಹೇಳಿರುವುದಾಗಿ ವರದಿಯಾಗಿದೆ.