ಇರಾನಿನ ಮೇಲೆ ಮತ್ತೆ ಬಾಂಬ್ ದಾಳಿಯ ಬಗ್ಗೆ ಪರಿಶೀಲನೆ : ಟ್ರಂಪ್
ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಇರಾನಿನ ಪರಮೋಚ್ಛ ನಾಯಕ ಖಾಮಿನೈ ಅವರ ಹೇಳಿಕೆಯನ್ನು ಟೀಕಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ `ಒಂದು ವೇಳೆ ಇರಾನ್ ಯುರೇನಿಯಂ ಅನ್ನು ಆತಂಕಕಾರಿ ಮಟ್ಟಕ್ಕೆ ಸಮೃದ್ಧಿಗೊಳಿಸಿದರೆ ಇರಾನಿನ ಮೇಲೆ ಮತ್ತೆ ಬಾಂಬ್ ದಾಳಿಯ ಬಗ್ಗೆ ಪರಿಶೀಲಿಸುವುದಾಗಿ' ಹೇಳಿದ್ದಾರೆ.
ಇರಾನಿನ ಪರಮಾಣು ತಾಣಗಳ ಮೇಲೆ ಕಳೆದ ವಾರ ಅಮೆರಿಕ ನಡೆಸಿದ್ದ ಬಾಂಬ್ ದಾಳಿಗೆ ಪ್ರತಿಯಾಗಿ ಖತರ್ ನಲ್ಲಿರುವ ಅಮೆರಿಕನ್ ಸೇನಾನೆಲೆಯ ಮೇಲೆ ದಾಳಿ ನಡೆಸುವ ಮೂಲಕ ಇರಾನ್ ಅಮೆರಿಕದ ಕಪಾಳಕ್ಕೆ ಬಾರಿಸಿದೆ. ಇರಾನ್ ಯಾವತ್ತೂ ಶರಣಾಗುವುದಿಲ್ಲ ಎಂದು ಖಾಮಿನೈ ಶುಕ್ರವಾರ ಹೇಳಿಕೆ ನೀಡಿದ್ದರು.
ಅವರ ದೇಶವು ನಾಶವಾಯಿತು. ಅವರ ಮೂರು ದುಷ್ಟ ಪರಮಾಣು ತಾಣಗಳನ್ನು ಅಳಿಸಿ ಹಾಕಲಾಯಿತು ಮತ್ತು ಅವರು ಎಲ್ಲಿ ಆಶ್ರಯ ಪಡೆದಿದ್ದಾರೆಂದು ನನಗೆ ತಿಳಿದಿತ್ತು. ಆದರೆ ಇಸ್ರೇಲ್ ಅಥವಾ ಅಮೆರಿಕನ್ ಸಶಸ್ತ್ರ ಪಡೆಗಳು ಖಾಮಿನೈ ಅವರ ಜೀವನವನ್ನು ಕೊನೆಗೊಳಿಸಲು ನಾನು ಬಿಡಲಿಲ್ಲ. ಅವರನ್ನು ಅತ್ಯಂತ ಕೊಳಕು ಮತ್ತು ಅವಮಾನಕರ ಸಾವಿನಿಂದ ರಕ್ಷಿಸಿದ್ದೆ ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.