ಅಮೆರಿಕಾ ಸರಕಾರದ ಕಾರ್ಯಸ್ಥಗಿತ ಕೊನೆಗೊಳಿಸುವ ಒಪ್ಪಂದಕ್ಕೆ ಟ್ರಂಪ್ ಸಹಿ
Update: 2025-11-13 22:44 IST
ಡೊನಾಲ್ಡ್ ಟ್ರಂಪ್ | Photo Credit : NDTV
ವಾಷಿಂಗ್ಟನ್, ನ.13: ಅಮೆರಿಕಾದ ಇತಿಹಾಸದಲ್ಲೇ ಅತ್ಯಂತ ಸುದೀರ್ಘವಾದ (43 ದಿನಗಳು) ಸರಕಾರದ ಕಾರ್ಯಸ್ಥಗಿತವನ್ನು ಕೊನೆಗೊಳಿಸುವ ಒಪ್ಪಂದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಸಹಿ ಹಾಕಿದ್ದಾರೆ.
ಕಾಂಗ್ರೆಸ್ ಅಂಗೀಕರಿಸಿದ ಧನಸಹಾಯ ಮಸೂದೆಗೆ ಅಧ್ಯಕ್ಷರು ಸಹಿ ಹಾಕುವುದರೊಂದಿಗೆ ಸರಕಾರಕ್ಕೆ ಜನವರಿಯವರೆಗೆ ಧನಸಹಾಯ ದೊರಕಲಿದೆ. ಅಲ್ಲದೆ ಫೆಡರಲ್ ಏಜೆನ್ಸಿಗಳು ಕಾರ್ಯಾರಂಭ ಮಾಡಲಿದ್ದು ತಕ್ಷಣ ಕೆಲಸ ಆರಂಭಿಸಲು ಸಿದ್ಧರಾಗಿರುವಂತೆ ಬಹುತೇಕ ಫೆಡರಲ್ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಸ್ಥಗಿತಗೊಳಿಸಿದ ಸಮಯದಲ್ಲಿ ಸಂಭವಿಸಿದ ಎಲ್ಲಾ ವಜಾಗೊಳಿಸುವಿಕೆಯನ್ನು ರದ್ದುಗೊಳಿಸಲಾಗುತ್ತದೆ ಮತ್ತು ಜನವರಿವರೆಗೆ ಮತ್ತಷ್ಟು ವಜಾಗೊಳಿಸುವಿಕೆಯನ್ನು ತಡೆಯಲಾಗುತ್ತದೆ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.